22 C
Karnataka
Friday, November 15, 2024

ಆ.24: ಪುರಭವನದಲ್ಲಿ “ತುಳುನಾಡ ಜಾನಪದ ಉಚ್ಛಯ

ಮಂಗಳೂರು: “ಅಖಿಲ ಭಾರತ ತುಳು ಒಕ್ಕೂಟದ ವತಿಯಿ೦ದ ಅಗಸ್ಟ್ 24, ಶನಿವಾರದಂದು ಪುರಭವನದಲ್ಲಿ ತುಳುನಾಡ ಜಾನಪದ ಉಚ್ಛಯ ಕಾರ್ಯಕ್ರಮ ನಡೆಯಲಿದ್ದು ಇದಕ್ಕೆ ತುಳುವರ ಸಹಕಾರ ನಿರೀಕ್ಷಿಸುತ್ತಿದ್ದೇವೆ“ ಎಂದು ಸಂಘಟನೆಯ ಅಧ್ಯಕ್ಷ ಎಸಿ ಭಂಡಾರಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 8.30ಕ್ಕೆ ತುಳುವೆರ ದಿಬ್ಬಣ ಮೆರವಣಿಗೆ ನಡೆಯಲಿದೆ. ಇದರಲ್ಲಿ ಸುಮಾರು 8 ಜಾನಪದ ಕಲಾಕೂಟಗಳು ಭಾಗವಹಿಸಲಿವೆ. ಈ ಸಮಾರಂಭವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ದಿವಾಕರ ಶೆಟ್ಟಿ ಸಾಂಗ್ಲಿ, ನಗ್ರಿಗುತ್ತು ರೋಹಿತ್‌ ಶೆಟ್ಟಿ, ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮುಂಬೈ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಕಂಬಳಕೂಟ ಹೆಸರುವಾಸಿಯಾದ ನಂದಳಿಕೆ ಶ್ರೀಕಾಂತ ಭಟ್ ರವರ ದಿಡ್ಡೆರು “ನಂದಳಿಕೆ
ಪಾಂಡು”ವಿಗೆ ಸಮ್ಮಾನ ಗೌರವ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಪುರಭವನದಲ್ಲಿ ನಡೆಯಲಿರುವ ನಮ್ಮ ತುಳುನಾಡ ಕಲಾಪಂಥವನ್ನು ಡಾ| ಎ. ಸದಾನಂದ ಶೆಟ್ಟಿ ಇವರು ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಇವರು ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಪ್ರೊ.ಪಿ.ಎಲ್, ಧರ್ಮ, ಬಿ.ರಮಾನಾಥ ರೈ, ಐವನ್ಡಿ’ಸೋಜ, ರಾಜೇಶ್ ಖನ್ನಾ, ಜಾನಕಿ ಬ್ರಹ್ಮಾವರ್ ಉಪಸ್ಥಿತರಿರಲಿದ್ದಾರೆ ಎ೦ದವರು ತಿಳಿಸಿದರು.
ವಿವಿಧ ಭಾಷಾ ಅಕಾಡೆಮಿಗಳ ಅಧ್ಯಕ್ಷರುಗಳಾದ ತಾರನಾಥ್ ಗಟ್ಟಿ ಕಾಪಿಕಾಡ್, ತಲ್ಲೂರು ಶಿವರಾಮ್ ಶೆಟ್ಟಿ, ಜೋಕಿಂ ಸ್ವಾನಿ ಅಲ್ವಾರಿಸ್, ಉಮರ್ ಯು. ಹೆಚ್. ಸದಾನಂದ ಮಾವಜಿ, ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಭಾಗವಹಿಸಲಿದ್ದಾರೆ. ನಮ್ಮ ತುಳುನಾಡ ಕಲಾಪಂಥದಲ್ಲಿ ಸುಮಾರು 13 ತುಳು ಸೇವಾ ಸಂಘಟನೆಗಳು ಭಾಗವಹಿಸಲಿದ್ದು, ಪ್ರಥಮ ನಗದು ಬಹುಮಾನ 50,000, ದ್ವಿತೀಯ ರೂ.30,000, ತೃತೀಯ ರೂ. 20,000 ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ
ಗೌರವ ಧನ ರೂ.5,000 ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು“ ಎಂದರು.
ಸಂಘಟನೆಯ ಪ್ರಧಾನ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿ ಅವರು ಮಾತನಾಡಿ , ”ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಸಭಾಧ್ಯಕ್ಷರಾಗಿ ಸ್ಪೀಕರ್ ಯು.ಟಿ. ಖಾದರ್,ಅತಿಥಿಗಳಾಗಿ ಶಿವರಾಜ್ ಎಸ್. ತಂಗಡಗಿ, ಸೋಮಣ್ಣ ಬೇವಿನಮರದಭಾಗವಹಿಸಲಿದ್ದಾರೆ. “ಪೆರ್ಮೆದ ತುಳುವೆ” 2024 – ಹಿರಿಯ ನಾಟಕಕಾರ, ನಟ, ನಿರ್ಮಾಪಕ, ನಿರ್ದೇಶಕ, ಸಂಘಟಕ ತೋನ್ಸೆ ವಿಜಯಕುಮಾರ್ ಶೆಟ್ಟಿ ಮುಂಬೈ ಇವರಿಗೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರಧಾನವನ್ನು ಡಾ| ಎಂ. ಮೋಹನ್ ಆಳ್ವ ಮೂಡಬಿದಿರೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಶಿಕಿರಣ್ ಶೆಟ್ಟಿ, ಮುಂಬೈ, ಐಕಳ ಹರೀಶ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಧರ್ಮಪಾಲ ಯು. ದೇವಾಡಿಗ, ಕೆ.ಡಿ. ಶೆಟ್ಟಿ, ರವೀಂದ್ರನಾಥ ಎಂ. ಭಂಡಾರಿ, ಕಿಶನ್ ಶೆಟ್ಟಿ ಮುಂಬೈಯವರುಉಪಸ್ಥಿತರಿರುವರು. ಬಹುಮಾನ ವಿತರಣೆಯನ್ನು ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ್ ಬಿ. ಶೆಟ್ಟಿಯವರು ನೆರವೇರಿಸಲಿದ್ದಾರೆ. ರಾತ್ರಿ ತ್ರಿ 7 ರಿಂದ 9 ರವರೆಗೆ ಅಕಾಡೆಮಿಗಳ ಪ್ರಾಯೋಜಿತ ಕಲಾ ಪ್ರದರ್ಶನ ನಡೆಯಲಿದೆ“ ಎಂದರು .
ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ದಾಮೋದರ ನಿಸರ್ಗ, ವಿಜಯಲಕ್ಷ್ಮಿ ಬಿ. ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ್, ಪ್ರಧಾನ ಕಾರ್ಯದರ್ಶಿ ಮುಚ್ಚಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ, ರಾಜೇಶ್ ಆಳ್ವ, ಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles