19.4 C
Karnataka
Wednesday, November 27, 2024

ಫಿಲ್ಮ್ ಸೊಭಾಣ್ ನಲ್ಲಿ ಮಕ್ಕಳ ಚಿತ್ರ ಅಪ್ಸರಧಾರ

ಮ೦ಗಳೂರು: ಮಾಂಡ್ ಸೊಭಾಣ್ ಆಯೋಜಿಸಿದ `ಫಿಲ್ಮ್ ಸೊಭಾಣ್’ ಕೊಂಕಣಿ ಚಲನ ಚಿತ್ರೋತ್ಸವದಲ್ಲಿ ಕೊಂಕಣಿ ಮಕ್ಕಳಿಗಾಗಿ ಚಲನಚಿತ್ರ ಪ್ರದರ್ಶನ ಆಗಸ್ಟ್ 28 ರಂದು ಭಾರತ್ ಸಿನೆಮಾಸ್ ಇಲ್ಲಿ ನಡೆಯಿತು. ಡಾ ಕೆ. ರಮೇಶ್ ಕಾಮತ್ ನಿರ್ದೇಶನದ ಅಪ್ಸರಧಾರ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಈ ಚಿತ್ರದ ಕೆಲಭಾಗಗಳನ್ನು ಈಜಿಪ್ಟ್ ನಲ್ಲಿ ಚಿತ್ರೀಕರಿಸಿದ್ದು, ತ್ರಿಡಿ ತಾಂತ್ರಿಕತೆ ಉಪಯೋಗಿಸಿದ ಮೊದಲ ಕೊಂಕಣಿ ಚಿತ್ರ ಇದಾಗಿದೆ. ಈ ಸಂದರ್ಭದಲ್ಲಿ ಡಾ ಕಾಮತ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ನವೀನ್ ಲೋಬೊ, ರೊನಿ ಅರುಣ್ ಹಾಗೂ ವಿಕಾಸ್ ಲಸ್ರಾದೊ ಉಪಸ್ಥಿತರಿದ್ದರು. ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾದ ಕುಲಶೇಖರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಚಲನಚಿತ್ರವನ್ನು ವೀಕ್ಷಿಸಿ ಸಂತಸಪಟ್ಟರು.

ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಈ ಚಿತ್ರೋತ್ಸವವು ಆಗಸ್ಟ್ 23 ರಿಂದ ಸೆಪ್ಟೆಂಬರ್ 14 ರವರೆಗೆ ನಡೆಯುತ್ತಿದ್ದು, ಕರ್ನಾಟಕ ಹಾಗೂ ಗೋವಾದ ಸುಮಾರು 25 ಚಲನಚಿತ್ರಗಳು, 5 ಕಿರುಚಿತ್ರಗಳು ಹಾಗೂ 2 ಮಕ್ಕಳ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles