24 C
Karnataka
Friday, November 15, 2024

ಪ್ಲಾಸ್ಟಿಕ್ ನಿರ್ಮೂಲನಕ್ಕೆ ಜನ ಜಾಗೃತಿ ಮೂಡಿಸುವ ಅಗತ್ಯವಿದೆ :ಸ್ಪೀಕರ್ ಯು. ಟಿ .ಖಾದರ್

ಮಂಗಳೂರು: ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಗಳ ಕುರಿತು ಜನಜಾಗೃತಿ ಮೂಡಿಸುವ ಕೆಲಸಗಳನ್ನು ಸಂಘ ಸಂಸ್ಥೆಗಳು ಮಾಡಬೇಕು. ಇದನ್ನು ಸಂಪೂರ್ಣ ನಿಯಂತ್ರಿಸಲು ಜನರ ಸಹಭಾಗಿತ್ವ ಅಗತ್ಯ ಇದೆ ಎಂದು ವಿಧಾನ ಸಭೆ ಸ್ಪೀಕರ್ ಯು. ಟಿ. ಖಾದರ್ ಹೇಳಿದರು.
ನೂತನವಾಗಿ ಆರಂಭಗೊಂಡ ಸ್ವಚ್ಚ ಪರಿಸರ ಪ್ರತಿಷ್ಠಾನ ವನ್ನು ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು. ಪ್ಲಾಸ್ಟಿಕ್ ಮರು ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಮುತುವರ್ಜಿಯಿಂದ ಕೆಲಸ ಮಾಡಬೇಕು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳನ್ನು ಪ್ಲಾಸ್ಟಿಕ್ ಜಾಗ್ರತಿ ಅಭಿಯಾನದಲ್ಲಿ ತೋಡಗಿಸಿಕೊಳ್ಳುವ0ತೆ ಸಲಹೆ ನೀಡಿದರು.
ಸ್ವಚ್ಚ ಪರಿಸರ ಪ್ರತಿಷ್ಠಾನ ಟ್ರಸ್ಟಿ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ ಮುಖ್ಯ ಸ೦ಯೋಜಕ ರಂಜನ್ ಬೆಳ್ಳಪಾರ್ದಿ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಉಪ ಮೇಯರ್ ಸುಮಂಗಲ ರಾವ್, ಪಾಲಿಕೆ ಸದಸ್ಯ ವಿನಯರಾಜ್,ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸ೦ಯೋಜನಾಧಿಕಾರಿ ಶೇಷಪ್ಪ ಅಮೀನ್,ಮಂಗಳೂರು ವಲಯ ಪಿ ಆರ್ ಓ ರೆ- ಡಾ- ಜೆ.ಬಿ. ಸಲ್ಡಾನ್ಹಾ. ಹರೇಕಳ ಜುಮ್ಮಾ ಮಸೀದಿ ಧರ್ಮ ಗುರುಗುರು ಹಫಿಲ್ ಯಾಕೂಬ್ ಸಹಿದಿ ಉಪಸ್ಥಿತರಿದ್ದರು. ಪುಷ್ಪರಾಜ್ ಸ್ವಾಗತಿಸಿ ವಂದಿಸಿದರು. ಪ್ರಿಯಾ ಹರೀಶ್ ಶೆಟ್ಟಿ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles