ಮಂಗಳೂರು: ಅಮೇರಿಕಾ ದೇಶದಲ್ಲಿ ಯಕ್ಷಗಾನ ಕಲೆಯ ದಿಗ್ವಿಜಯವನ್ನು ಕೈಗೊಂಡಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಮೇರಿಕದಲ್ಲಿ ಮತ್ತೊಂದು ಮೈಲುಗಲ್ಲನ್ನು ಸ್ಥಾಪಿಸಿದೆ.
ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಜುಲೈ 27 ನೇ ತಾರೀಕನ್ನು ಯಕ್ಷದ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ, ಇದೀಗ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ಫೀಲ್ಡ್ ನಗರದಲ್ಲಿ ಯಕ್ಷಗಾನ ಕಲೆಯನ್ನು ಹಾಗೂ ಪಟ್ಲ ಫೌಂಡೇಶನ್ ಕೈಗೊಂಡಿರುವ ಮಹಾನ್ ಕಾರ್ಯವನ್ನು ಶ್ಲಾಘಿಸಿ ಅಲ್ಲಿಯ ಮೇಯರ್ ಸ್ಟೀವನ್ ವಿ ಪೋಂಟೋ ಅವರು ಕೂಡ ಆಗಸ್ಟ್ 18ನೇ ತಾರೀಕನ್ನು ಬ್ರೂಕ್ಫೀಲ್ಡ್ ನಗರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದಾರೆ. ಈ ಸಾಧನೆಯಲ್ಲಿ ನಿರ್ಣಾಯಕ ಬೆಂಬಲ ನೀಡಿದ ಮಿಲ್ವಾಕೀ ಕನ್ನಡ ಸಂಘಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ.