ಮಂಗಳೂರು: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಮಂಗಳೂರು ಘಟಕದ ವತಿಯಿ೦ದ ಓಣಂ ಹಬ್ಬವನ್ನು ಪಾಂಡೇಶ್ವರದ ಫಿಜಾ ನೆಕ್ಸಸ್ ಮಾಲ್ ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪರಿಸರ ಸ್ನೇಹಿ ಗ್ರೀನ್ ಹೀರೋ ಆಫ್ ಇಂಡಿಯಾ ಎಂಬ ಖ್ಯಾತಿಯನ್ನು ಹೊಂದಿರುವ ,ಗುಜರಾತ್ ಸರ್ಕಾರದ ವಿಶೇಷ ರಾಜ್ಯ ಪ್ರಶಸ್ತಿ ವಿಜೇತರಾದ ಮೂಲತಃ ಸುಳ್ಯದವರಾದ ಡಾ.ರಾಧಾಕೃಷ್ಣನ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದರು. ನಾಯರ್ ಸಂಘಟನೆಯು ಸಮಾಜಕ್ಕೆ ನೀಡಿದ ಕೊಡುಗೆಗಳು ಶ್ಲಾಘಿಸಿ ಪರಿಸರ ಸಂರಕ್ಷಣೆ ಮತ್ತು ಕಾಡುಗಳನ್ನು ಬೆಳೆಸುವ ಮಹತ್ವವನ್ನು ವಿವರಿಸಿದರು.
ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಮಂಗಳೂರು ಘಟಕದ ಅಧ್ಯಕ್ಷ ಮುರಳಿ. ಹೆಚ್ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ರಾಜ್ಯಸಮಿತಿಯ ಅಧ್ಯಕ್ಷ ರಾಮಚಂದ್ರನ್ ಪಾಲೇರಿ, ಮುಖ್ಯ ಕಾರ್ಯದರ್ಶಿ ಮುರಳಿದರನ್, ಉಪಾಧ್ಯಕ್ಷ. ಪಿ.ಕೆ.ಎಸ್. ಪಿಳ್ಯೆ, ಯೂನಿಯನ್ ಬ್ಯಾಂಕ್‌ನ ವಲಯ ಪ್ರಮುಖರಾದ ರೇಣು ಕೆ.ನಾಯರ್ ಭಾಗವಹಿಸಿ ಶುಭ ಹಾರೈಸಿದರು.
ಡಾ.ರಾಧಾಕೃಷ್ಣನ್ ನಾಯರ್, ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ ಚೀಫ್ ಜನರಲ್ ಮ್ಯಾನೇಜರ್ ವಿನೋದ್ ಎ.ಕೆ ಮತ್ತು ಎಂ.ಆರ್.ಪಿ.ಎಲ್‌ನ ನಿರ್ದೇಶಕ ನಂದಕುಮಾರ್ ಅವರನ್ನು ಗೌರವಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸತೀಶ್ ಕುಂಪಲ, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್ ಪೂಜಾರಿ, ಕಾರ್ಪೋರೇಟರ್ ವಿನಯರಾಜ್, ಇನ್‌ಕಮ್ ಟ್ಯಾಕ್ಸ್ ಕಮೀಷನರ್ ರಮಿತ್ ಚೆನ್ನಿತ್ತಲ, ಪ್ರಾವಿಡೆಂಟ್ ಫಂಡ್ ಕಮೀಷನರ್ ಎ.ಪಿ.ಉಣ್ಣಿಕೃಷ್ಣನ್, ಕನ್ನಡ ಮತ್ತು ತುಳು ಚಲನಚಿತ್ರದ ನಟರಾದ ಸ್ವರಾಜ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಕೇರಳ ಸಮಾಜಂನ ಅಧ್ಯಕ್ಷ ಟಿ.ಕೆ.ರಾಜನ್, ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಸಂದೇಶ್ ಎಮ್, ನಾರಾಯಣ ಸಾಂಸ್ಕಾರಿಕ ವೇದಿಯ ಅನಿಲ್ ದಾಮೋದರನ್, ಮಲಯಾಳಿ ಸಮೂಹದ ಅಧ್ಯಕ್ಷ ರಿಂಜು, ಕೈರಳಿ ಕಲಾವೇದಿ ಸುರತ್ಕಲ್‌ನ ಅಧ್ಯಕ್ಷ ನಿಕ್ಲಾ ಬೋಸ್, ಕರಾವಳಿ ಫ್ರೆಂಡ್ಸ್ ಸರ್ಕಲ್ ಮಂಗಳೂರಿನ ಅಧ್ಯಕ್ಷ ಕೆ.ಕೆ.ರಾಧಾಕೃಷ್ಣನ್ ಭಾಗವಹಿಸಿ ಶುಭ ಕೋರಿದರು.
ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಕಾರ್ಯದರ್ಶಿವಿ.ಎಮ್. ಸತೀಶನ್ ಸ್ವಾಗತಿಸಿದರು ಮತ್ತು ಜತೆ ಖಜಾಂಚಿ ಸತೀಶ್ ಕುಮಾರ್ ಆರ್ ಎಲ್ ವಂದಿಸಿದರು. ಮಾತೃಭೂಮಿ ಮಲಯಾಳಿ ದೈನಿಕದ ವರದಿಗಾರ ರಿಂಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕಿ ಸಿಂಧು ಎಸ್ ನಿರೂಪಿಸಿದರು.