21.2 C
Karnataka
Saturday, November 16, 2024

ಕರಾವಳಿ ಸಂಗೀತ ಕಲಾವಿದರ ಒಕ್ಕೂಟ :ಸ್ವರ ಕುಡ್ಲ ಸೀಸನ್- 6. ಸಂಗೀತ ಸ್ಪರ್ಧೆ ಉದ್ಘಾಟನೆ

ಮ೦ಗಳೂರು: ಶ್ರದ್ಧೆ ಮತ್ತು ಛಲದಿಂದ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಯಾವುದೇ ಕಲೆಯ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಮುನ್ನ ಶ್ರದ್ಧೆ ಮತ್ತು ಛಲದಿಂದ ಅದನ್ನು ಕರಗತ ಮಾಡಿಕೊಳ್ಳುವ ಅವಿರತ ಪ್ರಯತ್ನ ಇರಬೇಕು. ಎಂದು ಖ್ಯಾತ ಜ್ಯೋತಿಷಿ ಗಾಯಕ ಶ್ರೀ ಉದಯಕುಮಾರ್ ಅಭಿಪ್ರಾಯ ಪಟ್ಟರು.


ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಉಡುಪಿ ಜಿಲ್ಲೆ ಇದರ ಸ್ವರ ಕುಡ್ಲ ಸೀಸನ್- 6. ಸಂಗೀತ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್‌ ದಿವಾಕರ್ ಪಾಂಡೇಶ್ವರ್, ಮ.ನ. ಪಾ.ಸದಸ್ಯ ಅಬ್ದುಲ್ ಲತೀಫ್ ಕಂದುಕ, ರತ್ನಾಸ್ ವೈನ್ ಗೇಟ್ ಮಾಲಕ ಡಿ.ರಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಒಕ್ಕೂಟದ ಸ್ಥಾಪಕ ಅಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ,ಉಪಾಧ್ಯಕ್ಷ ರಾಧಾಕೃಷ್ಣ ಭಟ್ ಉಡುಪಿ , ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ, ಖಜಾಂಚಿ ಸತೀಶ್ ಅತಿಥಿಗಳನ್ನು ಗೌರವಿಸಿದರು. ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ ಸ್ವಾಗತಿಸಿದರು. ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಶೆಟ್ಟಿ, ಮಹಮದ್ ಇಕ್ಬಾಲ್, ನವಗಿರಿ ಗಣೇಶ್, ರಮೇಶ್ ಸಾಲ್ಯಾನ್, ಮಲ್ಲಿಕಾ ಶೆಟ್ಟಿ, ಹಾಗೂ ಸುಭಾಷಿತ್ ಕುಮಾರ್, ಮುಕ್ತಶ್ರೀನಿವಾಸ್ ಉಡುಪಿ , ಹುಸೇನ್ ಕಾಟಿಪಳ್ಳ, ದಿನಕರ ಪಾಂಡೇಶ್ವರ್, ಧನುರಾಜ್, ಕೆಆರ್ ಕಾರಂತ್, ಚೈತ್ರ ಸುವರ್ಣ ಧನ್ಯ,ಶ್ರೀ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.


ಆಡಿಷನ್ ಮತ್ತು ಸೆಮಿ ಫೈನಲ್ ಸ್ಪರ್ಧೆಯ ತೀರ್ಪುಗಾರರಾಗಿ ಮುರಳಿಧರ್ ಕಾಮತ್, ಶಿನಾಯ್, ಪಲ್ಲವಿ ಪ್ರಭು, ಕಿರಣ್ ಕುಮಾರ್, ಯಶವಂತ್ ಜಿ. ಸೌಮ್ಯ ಭಟ್ ಸಹಕರಿಸಿದರು. ವಿ ಜೆ ಶೀಶಾನ್ ಕೌಡೂರು ನಿರೂಪಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles