ಮ೦ಗಳೂರು: ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ ಅ.2 ರಂದು ಬಾಚಾಳಿಕೆಯ ಸ್ನೇಹಾಲಯ ಸಂಸ್ಥೆ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಮುಂಜಾನೆ 9.30ಘಂಟೆಗೆ ನಡೆಯುವ ಸಮಾರ೦ಭದಲ್ಲಿ ನೂತನ ಕೇಂದ್ರದ ಉದ್ಘಾಟನೆಯನ್ನು ಮೈಕಲ್ ಡಿ ಸೋಜ, (ಭಾರತೀಯ ಅನಿವಾಸಿ
ಉದ್ಯಮಿ, ದುಬಾಯಿ) ಅವರು ನೆರವೇರಿಸುವರು. ಕೇಂದ್ರದ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ.
ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನೆರವೇರಿಸುವರು.ಮುಖ್ಯ ಅತಿಥಿಗಳಾಗಿ ದೆಹಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷರಾದ ಅತೀ
ವಂದನೀಯ ದೀಪಕ್ ವಲೇರಿಯನ್ ತಾವ್ರೊರವರು ಭಾಗವಹಿಸಲಿದ್ದಾರೆ.ಪ್ರಮುಖ ಭಾಷಣಕಾರಾರಾಗಿ, ವಿಶೇಷ ಅಹ್ವಾನಿತರಾದ ಪತ್ರಕರ್ತೆ ವಿಜಯಲಕ್ಶ್ಮೀ ಶಿಬರೂರು, ಬಹು ಧಾರ್ಮಿಕ ಜ್ಞಾನಿ ಆತ್ಮದಾಸ್ ಯಾಮಿ ಸಂದೇಶ ನೀಡಲಿದ್ದಾರೆ.
ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್, ಯು. ಟಿ ಖಾದರ್, ಮಂಜೆಶ್ವರ ಶಾಸಕ ಎ.ಕೆ.ಎಮ್. ಅಶ್ರಫ಼್, ಉದುಮ ಶಾಸಕ ಕುಞ೦ಬು,ದಾಯ್ಜಿವಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಆಗಮಿಸಲಿದ್ದಾರೆ.
ಜೋಸೆಫ್ ಕ್ರಾಸ್ತಾ, ಅವರಿ೦ದ ಸ್ಥಾಪನೆಗೊ೦ಡ ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯು ಕಳೆದ 15 ವರುಷಗಳಿಂದ, ಮಂಜೆಶ್ವರದ ಪಾವೂರು ಬಳಿಯ ಬಾಚಾಳಿಕೆ ಎಂಬಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಆಶ್ರಮ ಒಂದನ್ನು ಸ್ಥಾಪಿಸಿ, ಅವರಿಗೆ ಅಸರೆ ಒದಗಿಸಿದ್ದು, ರೋಗಿಗಳ ಶೂಶ್ರುಷೆಮಾಡಿ, ಔಷೋದೊಪಚಾರ ನೀಡಿ, ಅವರನ್ನು ಗುಣಪಡಿಸಿ ಗುಣಪಟ್ಟ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ, ಸೇವೆಯನ್ನು ನಿಸ್ವಾರ್ಥವಾಗಿ ನಡೆಸುತ್ತಿದೆ. ಇಂದು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ವಿವಿಧ ಕಾರ್ಯಕ್ರಮಗಳಿಂದ ಸೇವಾ ಕ್ಷೇತ್ರದ ಮುಂಚೂಣಿಯಲ್ಲಿದೆ. ಮಾನಸಿಕ ಅಸ್ವಸ್ಥ, ನಿರ್ಲಕ್ಷಿತ, ನಿರಾಧಾರ, ವಯೋವೃದ್ಧರ ಭರವಸೆಯ ಆಶ್ರಯವಾಗಿದೆ. . ಜಾತಿ, ಮತ,ಅಂತಸ್ತು, ಧರ್ಮವನ್ನು ಲೆಕ್ಕಿಸದೆ ಸಹೋದರ ಸಹೋದರಿಯರ ಭಾವನಾತ್ಮಾಕ ಕೊಂಡಿಗಳಿಂದ ಬೆಸೆದ ಪ್ರೀತಿಯ ಮನೆ“ಸ್ನೇಹಾಲಯ”ವಾಗಿದೆ. ಇದು ಇಂದು ಮೂರು ಬೆಡ್‌ರೂಮ್‌ಗಳ ಮನೆಯಿಂದ 300 ನಿವಾಸಿಗಳಿಗೆ ಸಾಕಾಗುವಷ್ಟುಸೌಲಭ್ಯವನ್ನು ಹೊಂದಿದ್ದು, ಅವರಲ್ಲಿ 2023ವರೆಗೆ 800ಕ್ಕೂ ಹೆಚ್ಚು ಜನರು ತಮ್ಮ ಕುಟುಂಬಗಳೊಂದಿಗ ಭಾರತದಾದ್ಯಂತ ಮತ್ತೆ ಒಂದಾಗಿದ್ದಾರೆ.