ಮ೦ಗಳೂರು: ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸುವ ಕಾರ್ಯಕ್ರಮವು ಅಕ್ಟೋಬರ್ 6ರಂದು ಕೆಲರೈ ಚರ್ಚಿನಲ್ಲಿ ನಡೆಯಿತು.
ಕಲಿಕೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಎಸ್.ಎಸ್.ಎಲ್.ಸಿ, ಪಿಯುಸಿ, ಡಿಗ್ರಿ ಹಾಗೂ ಇಂಜಿನಿಯರಿ೦ಗ್ ವಿದ್ಯಾರ್ಥಿಗಳನ್ನು ಕಥೊಲಿಕ್ ಸಭಾ ಕೆಲರೈ ಘಟಕ ಹಾಗೂ ಕೆಲರೈ ಚರ್ಚಿನ ಶಿಕ್ಷಣ ಆಯೋಗ ಇವರ ಜಂಟಿ ಸಹಯೋಗದಲ್ಲಿ ಪುರಸ್ಕರಿಸಿ ಸನ್ಮಾನಿಸುವ ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸರ್ಟಿಫಿಕೇಟ್ ನೀಡಿ ಚರ್ಚಿನ ಧರ್ಮಗುರು ಫಾದರ್ ಸಿಲ್ವೆಸ್ಟರ್ ಡಿಕೋಸ್ಟಾ ಅಭಿನಂದಿಸಿದರು. ಇದೇ ವೇಳೆ ಗುರುದೀಕ್ಷೆ ಪಡೆದು 4 ವರ್ಷಗಳನ್ನು ಪೂರೈಸಿದ ರೆಸಿಡೆಂಟ್ ಗುರು ಫಾದರ್ ರೋಶನ್ ಫೆರ್ನಾಂಡಿಸ್ ಇವರಿಗೂ ಹೂಗುಚ್ಚ ನೀಡಿ ಅಭಿನಂದಿಸಲಾಯ್ತು.
ಕಾರ್ಯಕ್ರಮಕ್ಕೆ ಕಥೊಲಿಕ್ ಸಭಾ ಕೆಲರೈ ಘಟಕದ ಅಧ್ಯಕ್ಷೆ ಡೊರತಿ ಬ್ರಾಗ್ಸ್, ಪ್ರೇಮಾ ಡಿಸೋಜಾ, ಮೆಲ್ವಿನ್ ಸಿಕ್ವೇರಾ, ಫ್ಲಾವಿಯಾ ಮೊರಾಸ್, ಸಂತೋಷ್ ಡಿಕೊಸ್ಟಾ, ಸೆಲಿನ್ ಡಿಮೆಲ್ಲೊ, ಹೆರಾಲ್ಡ್ ಮೊಂತೇರೊ, ಲೂಸಿ ರೊಡ್ರಿಗಸ್ ಹಾಗೂ ಗೋಡ್ವಿನ್ ವಾಸ್ ಹಾಜರಿದ್ದರು.