24.9 C
Karnataka
Friday, November 15, 2024

ಕರ್ನಾಟಕದ ನಾಲ್ಕು ಜೆಸ್ವಿಟ್ ಉಪಯಾಜಕರಿಗೆ ಮಂಗಳೂರಿನಲ್ಲಿ ಗುರುದೀಕ್ಷೆ

ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹರವರು, ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ನಾಲ್ಕು ಉಪಯಾಜಕರುಗಳಿಗೆ ಯಾಜಕ ದೀಕ್ಷೆಯನ್ನು ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಅಕ್ಟೋಬರ್ ೧೨ ರಂದು ನೀಡಿದರು. ಗುರುದೀಕ್ಷೆ ಪಡೆದ ಉಪಯಾಜಕರು: ವಂ. ಮ್ಯಾಕ್ಸಿಮ್ ಮಾರ್ಟಿನ್ ಡಿಸೋಜ, ವಂ. ಜೋಸ್ವಿನ್ ಪಿರೇರಾ, ವಂ. ಕಿರಣ್ ಲೀಮಾ, ಹಾಗೂ ವಂ. ವಿಲ್ಸನ್ ಸಲ್ಡಾನ್ಹಾ. ತಮ್ಮ ಪ್ರಭೊಧನೆಯಲ್ಲಿ ಓರ್ವ ಯಾಜಕನು ಕ್ರಿಸ್ತನ ರಾಯಭಾರಿಗಾಗಿ ತಮ್ಮ ಜೀವನದಲ್ಲಿ ಕ್ರಿಸ್ತನು ಸಾರಿದ ಮೌಲ್ಯಗಳನ್ನು ಪ್ರತಿಬಿಂಬಿಸಲು ಕರೆನೀಡಿದರು. “ದೇವರಿಂದ ಅಭಿಷಿಕ್ತನಾದವನ ಬಲವೇ ದೇವರ ಸಾನಿಧ್ಯ. ನಾವು ಕ್ರಿಸ್ತನಂತಾಗಲು ಕ್ರಿಸ್ತನ ಜೀವನ ಮತ್ತು ಕಾಯಕವನ್ನು ಅನುಸರಿಸುವ ಯಾಜಕರಾಗಬೇಕು” ಎಂದು ಕರೆನೀಡಿದರು. ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂದನೀಯ ಸ್ವಾಮಿ ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ವಂದನೀಯ ಸ್ವಾಮಿ ಅನಿಲ್ ಡಿಮೆಲ್ಲೊ ಹಾಜರಿದ್ದರು. ವಂದನೀಯ ಸ್ವಾಮಿ ವಿಶ್ವಾಸ್ ಮಿಸ್ಕಿತ್ರವರು ಬಲಿಪೂಜೆಯ ನಿರ್ವಹಣೆಯನ್ನು ನೋಡಿಕೊಂಡರು. ವಂದನೀಯ ಸ್ವಾಮಿ ಲೆಸ್ಟನ್ ಲೋಬೊರವರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನೋಡಿಕೊಂಡರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles