23.4 C
Karnataka
Sunday, November 17, 2024

ಅಬಕಾರಿ ಕಾರ್ಯಾಚರಣೆ : ಮದ್ಯ, ಗಾಂಜಾ ವಶ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ/ಸಾಗಾಟ ಚಟುವಟುಕೆಗಳನ್ನು ತಡೆಗಟ್ಟುವ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ತೀವ್ರ ಕಾರ್ಯಾಚರಣೆ ನಡೆಸಿ ಅಕ್ಟೋಬರ್ ತಿಂಗಳಿನಲ್ಲಿ ಜಪ್ತುಪಡಿಸಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಕ್ಟೋಬರ್ 18ರಂದು ಬೈಕಂಪಾಡಿಯ, ಕೆ.ಎಸ್.ಬಿ.ಸಿ.ಎಲ್ ಡಿಪೊ-2ಇಲ್ಲಿಗೆ ಹಾಸನದಿಂದ ಒಟ್ಟು 1100 ಪೆಟ್ಟಿಗೆ (10,680 ಲೀ) ಬಿಯರ್ ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಲಾರಿಯ ಮೂಲಕ ಸರಬರಾಜಾಗಿದ್ದು, ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಬಿಯರ್ ಸರಬರಾಜು ಮಾಡಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆಹಚ್ಚಿ ವಾಹನ ಮತ್ತು ಬಿಯರನ್ನು ಜಫ್ತಿಪಡಿಸಿ ಕೇಸು ದಾಖಲಿಸಲಾಗಿದೆ.

ಅಕ್ಟೋಬರ್ 14ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ಪಯಸ್ವಿನಿ ರಿಫ್ರೆಶ್ಮೆಂಟ್ ಆಂಡ್ ಕೂಲ್ ಜೋನ್ ಎಂಬ ಅಂಗಡಿಯಲ್ಲಿ ಹೋಮ್ ಮೇಡ್ ವೈನ್ ನ್ನು ಅಕ್ರಮವಾಗಿ ದಾಸ್ತಾನು ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 111.750 ಲೀ ವೈನ್ ಜಫ್ತಿಪಡಿಸಿ ಅಬಕಾರಿ ಇಲಾಖೆಯ ಅಧಿಕಾರಿ ಪ್ರಕರಣವನ್ನು ದಾಖಲಿಸಲಾಗಿದೆ.

ಅಕ್ಟೋಬರ್ 20 ರಂದು ಬೈಕಂಪಾಡಿಯಿಂದ ಬಜಪೆಗೆ ಹೋಗುವ ರಸ್ತೆಯಲ್ಲಿ ಯಾವುದೇ ರಹದಾರಿಯಿಲ್ಲದೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 3.690 ಲೀ ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕು ಕನ್ಯಾಡಿ ಗ್ರಾಮದ ಗುರಿಪಳ್ಳ ಎಂಬಲ್ಲಿ ಇರುವ ಪ್ರವೀಣ ರೋಡ್ರಿಗಸ್ ಎಂಬಾತನ ಮನೆಯ ಮೇಲೆ ಅಬಕಾರಿ ದಾಳಿ ಮಾಡಲಾಗಿ, ಮನೆಯಲ್ಲಿ ಅಕ್ರಮವಾಗಿ ತಯಾರಿಸಿ ಪ್ಲಾಸ್ಟಿಕ್‍ಕ್ಯಾನ್ ನಲ್ಲಿ ಸಂಗ್ರಹಿಸಿಟ್ಟಿದ್ದ 18.75 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ಹಾಗೂ ಕಳ್ಳಬಟ್ಟಿ ತಯಾರಿಸಲು ಪ್ಲಾಸ್ಟಿಕ್ ಡ್ರಮ್ ನಲ್ಲಿ ಶೇಖರಿಸಿ ಇಟ್ಟಿರುವ 37 ಲೀಟರ್ ವಾಶ್ ಅನ್ನು ಮತ್ತು ಕಳ್ಳಬಟ್ಟಿ ತಯಾರಿಸುವ ಪರಿಕರಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಅಕ್ಟೋಬರ್‌ ನಲ್ಲಿ ಒಟ್ಟು 19.170 ಮದ್ಯ ಹಾಗೂ 111.750 ವೈನ್ ಅನ್ನು ಅಬಕಾರಿ ಇಲಾಖೆಯಿಂದ ಜಪ್ತಿಪಡಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles