24.5 C
Karnataka
Sunday, November 17, 2024

ದುಬೈ ಗಡಿನಾಡ ಉತ್ಸವದಲ್ಲಿ ಶೈಕ್ಷಣಿಕ ಶ್ರೇಷ್ಠತೆಗಾಗಿ ಡಾ. ಫಖ್ರುದ್ದೀನ್ ಕುನಿಲ್ ಅವರಿಗೆ ಸನ್ಮಾನ

ಮ೦ಗಳೂರು: ದುಬೈನ ಔದ್ ಮೆಥಾದಲ್ಲಿರುವ ‘ಜೆಮ್’ ಖಾಸಗಿ ಶಾಲೆಯಲ್ಲಿ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದಿಂದ ಅಕ್ಟೋಬರ್ 13ರಂದು ಆಯೋಜಿಸಲಾದ ದುಬೈ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಪ್ರತಿಷ್ಠಿತ ಗಡಿನಾಡ ಪ್ರಶಸ್ತಿಯನ್ನು ಕುನಿಲ್ ಗ್ರೂಪ್ ಅಧ್ಯಕ್ಷರಾದ ಡಾ। ಫಖ್ರುದ್ದೀನ್ ಕುನಿಲ್, ಅವರಿಗೆ ನೀಡಿ ಗೌರವಿಸಿತು.‌


35 ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಶಿರಿಯಾ ಎಂಬ ಸಣ್ಣ ಗ್ರಾಮದಲ್ಲಿ ಡಾ। ಕುನಿಲ್ ಅವರ ಶೈಕ್ಷಣಿಕ ಯಾತ್ರೆಯು ಪ್ರಾರಂಭವಾಯಿತು. ಅಲ್ಲಿ ಅವರು ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಸಮಗ್ರ ಶಿಕ್ಷಣವನ್ನು ನೀಡುವ ಶಾಲೆಯನ್ನು ಸ್ಥಾಪಿಸಿದರು. ಸ್ಥಳೀಯ ಸಮುದಾಯದ ಸಹಕಾರದೊಂದಿಗೆ ಅವರು ಬದಿಯಡ್ಕದಲ್ಲಿ ಎರಡನೇ ಶಾಲೆಯನ್ನು ಸ್ಥಾಪಿಸಿದರು ಹಾಗೂ ಅವರ ನಿರಂತರ ಬೆಂಬಲದಿಂದ ಉತ್ತೇಜಿತರಾಗಿ, ಕರ್ನಾಟಕದ ನಾಟೆಕಲ್’ನಲ್ಲಿ ಮತ್ತು ತುಂಬೆಯಲ್ಲಿ ಕುನಿಲ್ ಶಾಲೆಗಳನ್ನು ವಿಸ್ತರಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕುನಿಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಫಕ್ರುದ್ದೀನ್ ಕುನಿಲ್ ಅವರು ಯು.ಎ.ಇ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥೆಯ ಪ್ರತಿಷ್ಠಿತ ಗಡಿನಾಡ ಪ್ರಶಸ್ತಿಹಾಗೂ ಕುನಿಲ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಪತ್ರಕರ್ತರೊಂದಿಗೆ ಹಂಚಿಕೊ೦ಡಿದ್ದಾರೆ.
ನಾಲ್ಕು ಶಾಲೆಗಳು 7000 ವಿದ್ಯಾರ್ಥಿಗಳಿಗೆ ಪೋಷಕ ಭೂಮಿಯಾಗಿ ಮಾರ್ಪಟ್ಟಿವೆ. 600 ವೃತ್ತಿಪರ ಸಿಬ್ಬಂದಿ ಮತ್ತು 125 ಶಾಲಾ ವಾಹನಗಳೊಂದಿಗೆ ಈ ಶಾಲೆಗಳು ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. 100% ಫಲಿತಾಂಶವನ್ನು ನಿರಂತರವಾಗಿ ಕುನಿಲ್ ಶಾಲೆಗಳು ಸಾಧಿಸುತ್ತಿವೆ, ಇದು ಡಾ. ಫಖ್ರುದ್ದೀನ್ ಕುನಿಲ್ ಅವರ ಶಿಕ್ಷಣದಲ್ಲಿನ ಶ್ರೇಷ್ಠತೆಯ ಬದ್ಧತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುಮತಿ ದೊರೆತರೆ ಅಧ್ಯಕ್ಷ ಡಾ। ಫಖ್ರುದ್ದೀನ್ ಕುನಿಲ್ ಅವರು ಬಿ.ಎ., ಬಿ.ಕಾಂ, ಬಿ.ಎಸ್ಸಿ ಮತ್ತು ಬಿ.ಬಿ.ಎ.ಯಲ್ಲಿ ಪದವಿ ಕೋರ್ಸ್‌ಗಳನ್ನು ಪರಿಚಯಿಸಲು ಯೋಜನೆಯನ್ನು ರೂಪಿಸಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಅವಕಾಶಗಳನ್ನು ಇನ್ನಷ್ಟು ಸಮೃದ್ಧಗೊಳಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಬಹುದಾಗಿದೆ.ಕುನಿಲ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ ಪ್ರಸಾದ್ ನಾಯ್ಕ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles