23.7 C
Karnataka
Friday, November 15, 2024

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

ಮಂಗಳೂರು: ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ವೇಳಾಪಟ್ಟಿ ಹೊರಡಿಸಿದ್ದು ಅಕ್ಟೋಬರ್ 29ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ.

ಅಕ್ಟೋಬರ್ 29 ರಿಂದ ನವೆಂಬರ್ 28 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ನವೆಂಬರ್ 9, 10 ಹಾಗೂ 23,24ರಂದು ವಿಶೇಷ ನೋಂದಣಿ ಅಭಿಯಾನ ಆಯಾ ಮತಗಟ್ಟೆಗಳಲ್ಲಿ ನಡೆಯಲಿದೆ.

ಡಿಸೆಂಬರ್ 24ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು ಜನವರಿ 6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.

ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ: ಬೆಳ್ತಂಗಡಿ – 232269, ಮೂಡಬಿದ್ರೆ -210211, ಮಂಗಳೂರು ನಗರ ಉತ್ತರ- 256112, ಮಂಗಳೂರು ನಗರ ದಕ್ಷಿಣ- 253407, ಮಂಗಳೂರು- 209955, ಬಂಟ್ವಾಳ- 229236, ಪುತ್ತೂರು-216821, ಸುಳ್ಯ- 209261

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 51815 ಮತದಾರರ ಸೇರ್ಪಡೆ. 22948 ತೆಗೆದು ಹಾಕಿದ್ದು ಹಾಗೂ 28827 ಹೆಸರು ತಿದ್ದುಪಡಿ ಮಾಡಲಾಗಿದೆ. 18ರಿಂದ 19ರ ಹರೆಯದ 19905 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. 85 ವರ್ಷ ಮೇಲ್ಪಟ್ಟ 23894 ಮತದಾರರಿದ್ದಾರೆ. 14268 ವಿಕಲಚೇತನ ಮತದಾರರಿದ್ದಾರೆ. 258 ಆನಿವಾಸಿ ಭಾರತೀಯ ಮತ್ತು 514 ಸೇವಾ ಮತದಾರರಿದ್ದಾರೆ .

ಜನವರಿ1, ಏಪ್ರಿಲ್1, ಜುಲೈ1, ಅಕ್ಟೋಬರ್1, ಈ ನಾಲ್ಕು ದಿನಗಳಂದು 18 ವರ್ಷ ತುಂಬಿರುವ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.

ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನವೆಂಬರ್ 9,10,23,24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಶೇಷ ನೋಂದಣಿ ಕಾರ್ಯಕ್ರಮ ನಡೆಯಲಿದ್ದು ಎಲ್ಲಾ ಅರ್ಹ ಮತದಾರರು ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮೊಬೈಲ್ ಆಪ್ voter helplineapp (VHA ಮೂಲಕ ಅಥವಾ ವೆಬ್‍ಸೈಟ್https://voters.eci.gov.in ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ವಯಸ್ಸು ಮತ್ತು ವಾಸಸ್ಥಳದ ದಾಖಲೆಗಳು ಮತ್ತು ಒಂದು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು.

ಅರ್ಜಿ ನಮೂನೆಗಳು:
ನಮೂನೆ 6 :- 18 ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು.
ನಮೂನೆ 6ಂ :- ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು.
ನಮೂನೆ 7:- ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು.
ನಮೂನೆ 8 :- ವಿಳಾಸ ಸ್ಥಳಾಂತರ, ಮತದಾರರ ಪಟ್ಟಿಯಲ್ಲಿ ಹೆಸರು, ತಂದೆಯ ಹೆಸರು, ವಿಳಾಸ, ವಯಸ್ಸು, ಲಿಂಗ ಮುಂತಾದವುಗಳನ್ನು ತಿದ್ದುಪಡಿ ಮಾಡಲು, ಎಪಿಕ್ ಕಾರ್ಡ್ ಬದಲಾಯಿಸಲು ಇತ್ಯಾದಿ.
ನಮೂನೆ 6ಃ:- ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು.

ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಅಥವಾ ಮತದಾರ ನೋಂದಣಾಧಿಕಾರಿ ಕಚೇರಿ (ಎ.ಸಿ ಕಚೇರಿ, ತಹಶೀಲ್ದಾರ್‍ಕಚೇರಿ) ಭೇಟಿ ನೀಡಿ ಮತದಾರರ ಹೆಸರು ನೋಂದಾಯಿಸುವ ಬಗ್ಗೆ ಅಥವಾ ಲೋಪದೋಷಗಳ ಬಗ್ಗೆ ಪರಿಶೀಲಿಸಬಹುದು. www.ecokarnataka.kar.nic.in,https://voters.eci.gov.in www.dk.nic.in ವಿವರಗಳನ್ನು ಪರಿಶೀಲಿಸಬಹುದು. ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಮತದಾರರ ಪಟ್ಟಿ ಪರಿಷ್ಕರಣೆ ಪರಿಣಾಮಕಾರಿಯಾಗಲು ಎಲ್ಲಾ ರಾಜಕೀಯ ಪಕ್ಷಗಳು ಪ್ರತಿ ಬೂತ್ ಮಟ್ಟದಲ್ಲಿ ಬಿಎಲ್‍ಎ ಗಳನ್ನು ನೇಮಕಾತಿ ಮಾಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles