25.5 C
Karnataka
Saturday, November 16, 2024

ನ.10 ರಂದು ಸುರತ್ಕಲ್ ನಲ್ಲಿ ರಂಗ ಚಾವಡಿ ವರ್ಷದ ಹಬ್ಬ

ಮ೦ಗಳೂರು : ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ರಂಗಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ನವಂಬರ್ 10 ರಂದು ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮ ನಡೆಯಲಿದ್ದು, ರಂಗ ಚಾವಡಿ ಪ್ರಶಸ್ತಿ 2024 ಪ್ರದಾನ ಸಮಾರಂಭ ನಡೆಯಲಿದೆ.


ರಂಗ ಸವ್ಯಸಾಚಿ ಲಯನ್ ಕಿಶೋರ್ ಡಿ ಶೆಟ್ಟಿ ಅವರನ್ನು 2024 ನೇ ಸಾಲಿನ ರಂಗಚಾವಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸಮಾರಂಭವನ್ನು ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮುಂಬೈಯ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚಲನ ಚಿತ್ರ ನಿರ್ಮಾಪಕ ಡಾ ಸಂಜೀವ ದಂಡೆಕೇರಿ, ಶ್ರೀ ಡೆವಲಪರ್ಸ್ ಕಟೀಲು ಸಂಸ್ಥೆಯ ಮಾಲಕ ಗಿರೀಶ್ ಎಂ ಶೆಟ್ಟಿ ಕಟೀಲು, ಚಲನ ಚಿತ್ರ ನಿರ್ಮಾಪಕ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಥಾಣೆ ಬಂಟ್ಸ್ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ನಿರ್ದೇಶಕ, ಉದ್ಯಮಿ ಜಗಧೀಶ್ ಶೆಟ್ಟಿ ಪೆರ್ಮುದೆ, ಚಲನ‌ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಪೂಂಜ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಎಂ ಲೋಕಯ್ಯ ಶೆಟ್ಟಿ, ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಪೇರ್ ಅಸೋಸಿಯೇಶನ್ (ರಿ ಅಧ್ಯಕ್ಷ ರಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಲಕುಮಿ ತಂಡದ ವ್ಯವಸ್ಥಾಪಕ, ರಂಗಸವ್ಯಸಾಚಿ ನಿರ್ದೇಶಕ, ಸಂಘಟಕ ಕಿಶೋರ್ ಡಿ ಶೆಟ್ಟಿ ಅವರನ್ನು ರಂಗಚಾವಡಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಬಳಿಕ ಕಲಾವಿದರಿಂದ ಗಾನ ಲಹರಿ ಮತ್ತು ಶ್ರೀ ಲಲಿತೆ ನಾಟಕ ತಂಡದಿಂದ “ಶನಿ ಮಹಾತ್ಮೆ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಚಾವಡಿಯ ಪ್ರಕಟನೆ ತಿಳಿಸಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles