ಮಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನವೆಂಬರ್ 9,10, 23 ಮತ್ತು 24ರಂದು ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಎಲ್ಲಾ ಬೂತುಮಟ್ಟದ ಅಧಿಕಾರಿಯವರು ಹಾಗೂ ಬಿಎಲ್ ಒ ಮೇಲ್ವಿಚಾರಕರು ಈ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮತಗಟ್ಟೆಯಲ್ಲಿ ಹಾಜರಿದ್ದು, ಅಲ್ಲಿಗೆ ಬರುವ ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆಯೆ ಎಂಬುದನ್ನು ಪರಿಶೀಲಿಸಿ ಅರ್ಹ ಮತದಾರರಿಂದ ನಾಲ್ಕು ಅರ್ಹತಾ ದಿನಾಂಕಗಳಿಗೆ (ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ನೇ) 18 ವರ್ಷ ತುಂಬುವ ಯುವ ಮತದಾರರಿಂದ ನಮೂನೆ-6 ನ್ನು ಸ್ವೀಕರಿಸುವರು.
ವಲಸೆಹೋದ / ಮೃತಪಟ್ಟ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ನಮೂನೆ 7ನ್ನು ಸ್ವೀಕರಿಸುವರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಲಟ್ಟ ನಮೂದುಗಳಲ್ಲಿ ವಿಳಾಸ ಬದಲಾವಣೆ, ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ನಮೂದುಗಳ ಸರಿಪಡಿಸುವಿಕೆ, ಯಾವುದೇ ತಿದ್ದುಪಡಿಗಳಿಲ್ಲದೆ ಬದಲಿ ಮತದಾರರ ಚೀಟಿ (ಎಪಿಕ್) ನೀಡುವಿಕೆ ಅಥವಾ ಅಂಗವಿಕಲ ವ್ಯಕ್ತಿ ಎಂದು ಗುರುತಿಸುವುದಕ್ಕೆ ಮನವಿ ಹಾಗೂ ಯಾವುದಾದರು ತಿದ್ದುಪಡಿ ಅವಶ್ಯವಿದ್ದಲ್ಲಿ ನಮೂನೆ 8 ನ್ನು ಸ್ವೀಕರಿಸುವರು.
ಸಾರ್ವಜನಿಕರಿಂದ/ಮತದಾರರಿಂದ ಸ್ವೀಕರಿಸಲ್ಪಟ್ಟ ಹಕ್ಕು ಮತ್ತು ಆಕ್ಷೇವಣೆಗಳನ್ನು ಅದೇ ದಿನ ಸಾಯಂಕಾಲ AERO ಕಛೇರಿಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲು ಸೂಚಿಸಬೇಕು.ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.