25 C
Karnataka
Thursday, November 14, 2024

ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಸಿರಿಧಾನ್ಯ ವಿತರಣೆ

ಮ೦ಗಳೂರು: ಎಂ.ಆರ್.ಪಿ.ಎಲ್ ಸಂಸ್ಥೆ ತಮ್ಮ ಸಿ.ಎಸ್.ಆರ್ ಅನುದಾನದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಎಂ.ಆರ್.ಪಿ.ಎಲ್ ಸಿ.ಎಸ್.ಆರ್. ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು ಅವರು ತಮ್ಮ ಸಂಸ್ಥೆ ವತಿಯಿಂದ ಎಂಡೋಸಲ್ಪಾನ್, ಎಚ್.ಐ.ವಿ, ರಕ್ತಬಲಹೀನತೆ, ಕ್ಷಯದಿಂದ ಬಲಳುವವರಿಗೆ ವೃದ್ದಾಶ್ರಮ ಮತ್ತಿತರ ಕಡೆಗಳಿಗೆ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುವ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳನ್ನು ವಿತರಿಸಿ ಮಾತನಾಡಿ ಎಂ.ಆರ್.ಪಿ.ಎಲ್ ಸಂಸ್ಥೆ ಈ ಹಿಂದೆಯೂ ಎಂಡೋಸಲ್ಪಾನ್ ಪೀಡಿತರಾಗಿದ್ದು ಮಲಗಿದಲ್ಲಿಯೇ ಇದ್ದ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ನೀಡಿದ್ದು, ವೃದ್ದಾಶ್ರಮ ಮತ್ತು ಅಸ್ಪತ್ರೆಗಳಿಗೆ ಅಂಬುಲೆನ್ಸ್ ವಾಹನ ನೀಡಿ ಸಹಕಾರ ನೀಡಿದೆ ಇದೀಗ ಅನಾರೋಗ್ಯದಿಂದ ಬಲಳುವ 1500 ಫಲಾನುಭವಿಗಳಿಗೆ ಸಿರಿಧಾನ್ಯ ನೀಡಿ ಸಹಕಾರ ನೀಡಲಾಗಿದೆ, ಫಲಾನುಭವಿಗಳು ಇದರಿಂದ ತಮ್ಮ ಆರೋಗ್ಯವನ್ನು ವೃದ್ದಿಸಬಹುದಾಗಿದೆ, ಒಟ್ಟು 20 ಲಕ್ಷ ರೂಪಾಯಿ ಬೆಲೆಬಾಳುವ 1800 ಕಿಲೋ ಸಿರಿಧಾನ್ಯ ವಿತರಿಸಲಾಗಿದ್ದು, ಹೆಚ್ಚಿನ ಕಡೆಗಳಿಗೆ ತೆರಳಿ ನೇರವಾಗಿ ಫಲಾನಿಭವಿಗಳಿಗೆ ನೀಡಲಾಗಿದೆ ಎಂದರು. ಈ ಸಂದರ್ಭ ಎಂ.ಆರ್.ಪಿ.ಎಲ್ ಅಧಿಕಾರಿ ಸ್ಟೀವನ್ ಪಿಂಟೋ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles