25 C
Karnataka
Thursday, November 14, 2024

ರಸ್ತೆ ಅಪಘಾತ: ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸ್ಪೀಕರ್‌ ಯು. ಟಿ. ಖಾದರ್ ಸೂಚನೆ

ಮ೦ಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆ ರಸ್ತೆ ಅಪಘಾತದಲ್ಲಿ ಕುತ್ತಾರಿನ ರಹ್ಮತ್ ಎಂಬುವವರು ಮೃತಪಟ್ಟಿದ್ದು,ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುವ ಕಾಮನ್ ವೆಲ್ತ್ ಪಾರ್ಲೆಮೆಂಟರಿ ಅಸೋಸಿಯೇಷನ್ ಸಮಾವೇಶದಲ್ಲಿದ್ದು ಮಾಹಿತಿ ಪಡೆದ ಸಭಾಧ್ಯಕ್ಷ ಯು ಟಿ ಖಾದರ್ ತೀವ್ರ ನೋವು ವ್ಯಕ್ತಪಡಿಸಿ ಮೃತ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

ಈಗಾಗಲೇ ಪ್ರಸ್ತುತ ರಸ್ತೆ ಅಭಿವೃದ್ಧಿಗಾಗಿ ಜನರಿಂದ ಬೇಡಿಕೆ ಬರುವ ಮೊದಲೇ ಸಭಾಧ್ಯಕ್ಷ ಯು ಟಿ ಖಾದರ್ ಸರಕಾರದಿಂದ ಮೂವತ್ತು ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು ಟೆಂಡರ್ ಪ್ರಕ್ರಿಯೆ ಕೂಡಾ ಮುಗಿದಿದೆ.
ಮಳೆಯ ಕಾರಣದಿಂದಾಗಿ ಕಾಮಗಾರಿ ಪ್ರಾರಂಭವಾಗಲು ವಿಳಂಬವಾಗಿತ್ತು.ಪ್ರತೀ ಮಳೆಗಾಲದ ಬಳಿಕ ರಸ್ತೆಗಳ ಗುಂಡಿಗಳು ಸರಿಪಡಿಸುವುದು ಸಂಬಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕರ್ತವ್ಯ,ರಸ್ತೆ ಗುಂಡಿಗಳ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿಯನ್ನು ಆಧರಿಸಿ ಈ ಘಟನೆ ಸಂಭವಿಸುವ ಕೆಲವೇ ಗಂಟೆಗಳ ಮೊದಲು ರಸ್ತೆ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸಭಾಧ್ಯಕ್ಷ ಯು ಟಿ ಖಾದರ್ ಸೂಚನೆ ನೀಡಿದ್ದರು.ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಂಡಿದ್ದು,ಅಪಘಾತದ ಕುರಿತು ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈ ಗೊಳ್ಳಲು ಯು ಟಿ ಖಾದರ್ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಪಘಾತವಾದ ಸಂದರ್ಭದಲ್ಲಿ ನೆರವಿಗೆ ಧಾವಿಸಿರುವ ಉಳ್ಳಾಲದ ಯುವಕರನ್ನು ಈ ಸಂದರ್ಭದಲ್ಲಿ ಯು ಟಿ ಖಾದರ್ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles