ಮ೦ಗಳೂರು:ರೋಟರ್ ಕ್ಲಬ್ ಮಂಗಳೂರು ಸೆಂಟ್ರಲ್, ರೋಟರಿ ಮಂಗಳೂರು ಸೆಂಟ್ರಲ್ -ಂಡೇಶನ್ ಮತ್ತು ರೋಟರ್‍ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇದರ ಸಂಯುಕ್ತಾಶ್ರಯದಲ್ಲಿ ೨೪ನೇ ವಾರ್ಷಿಕ ‘ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟ ಉರ್ವ ಕೆನರಾ ಹೈಸ್ಕೂಲ್ ಆವರಣದಲ್ಲಿ ರವಿವಾರ ದಿನವಿಡೀ ನಡೆಯಿಯು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಶಾರೀರಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ. ಹೆತ್ತವರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂಸನೀಯ ಎಂದು ಹೇಳಿದರು.
ಮುಖ್ಯ ಅತಿಥಿ ರೋಟರಿ ೩೧೮೧ ವಲಯ ೨ರ ಸಹಾಯಕ ಗವರ್ನರ್ ಕೃಷ್ಣ ಎಂ. ಹೆಗ್ಡೆ ಮಾತನಾಡಿ, ಕಳೆದ ೨೪ ವರ್ಷಗಳಿಂದ ರೋಟರಿ ಚಿಣ್ಣರ ಉತ್ಸವ ಆಯೋಜಿಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದ್ದಾರೆ. ಪ್ರತೀ ವರ್ಷವೂ ವಿನೂತನ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ನ ಅಧ್ಯಕ್ಷ ಬ್ರಾಯಾನ್ ಪಿಂಟೋ ಅವರು ಅಧ್ಯಕ್ಷತೆ ವಹಿಸಿದ್ದರು.
ಚಿಣ್ಣರ ಉತ್ಸವದಲ್ಲಿ ೧೦ ಅನಾಥಾಶ್ರಮದ ಸುಮಾರು ೪೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕ್ರೀಡಾ ಸ್ಪರ್ಧೆಗಳೊಂದಿಗೆ ಆರಂಭಗೊಂಡ ಉತ್ಸವ ಬಳಿಕ ಗಾನ, ನೃತ್ಯ, ನಾಟಕ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿಗಳಾದ ರಾಜೇಶ್ ಸೀತಾರಾಮ, ಮಂಗಳೂರು ಸೆಂಟ್ರಲ್ ಕಾರ್ಯದರ್ಶಿ ಅಕ್ಷಯ್ ಬಿ.ರೈ, ಚಿಣ್ಣರ ಬಣ್ಣ ಉತ್ಸವ ಚೇರ್‌ಮೆನ್ ರೊನಾಲ್ಡ್ ಮೆಂಡೋನ್ಸಾ, ರೋಟರಿ ಮಂಗಳೂರು ಸೆಂಟ್ರಲ್ -ಂಡೇಶನ್ ಅಧ್ಯಕ್ಷ, ಕ್ಲಬ್‌ನ ಸ್ಥಾಪಕಾಧ್ಯಕ್ಷ ಪ್ರೇಮನಾಥ ಕುಡ್ವ, ರೋಟರ್‍ಯಾಕ್ಟ್ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಜ್ ಗೋಪಾಲ್ ರೈ, ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯಕ್ರಮ ಸಂಯೋಜಕ ಕರಣ್ ಜೈನ್, ಪ್ರಮುಖರಾದ ಸಾಯಿಬಾಬ ರಾವ್, ರಾಮ್‌ದಾಸ್, ರವಿಜಲನ್, ಜಗನ್ನಾಥ ಶೆಟ್ಟಿ, ಶೆಲ್ಡನ್ ಕ್ರಾಸ್ತಾ, ಜನಾರ್ದನ ಆಳ್ವ, ವಿಕಾಸ್, ಪೂರ್ಣಿಮ ರೈ, ಪ್ರಮೀಳ ಸಹಿತ ಮತ್ತಿತರರು ಇದ್ದರು.