18.2 C
Karnataka
Friday, January 10, 2025

ದ.ಕ ಜಿಲ್ಲಾ ಪತ್ರಕರ್ತರ ಸಮ್ಮೇಳನದ ಸಮಾರೋಪ,ಸನ್ಮಾನ

ಮಂಗಳೂರು: ಸಮಾಜದಲ್ಲಿ ಮಾಧ್ಯಮಗಳು ಹಲವು ಇತಿಮಿತಿಗಳ ನಡುವೆ ಪ್ರತಿನಿತ್ಯ ಹಲವಾರು ಸುದ್ದಿಗಳನ್ನು ಶ್ರಮವಹಿಸಿ ಓದುಗರಿಗೆ ನೀಡುವ ಮಹತ್ವದ ಹೊಣೆಗಾರಿಕೆ ಯನ್ನು ಇಂದಿಗೂ ನಿಭಾಯಿಸುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ತಿಳಿಸಿದ್ದಾರೆ.
ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದ ದಿ.ಮನೋಹರ ಪ್ರಸಾದ್ ವೇದಿಕೆ, ದಿ. ಭುವನೇಂದ್ರ ಪುದುವೆಟ್ಟು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು.ಪತ್ರಿಕೆಗಳು ಜಾಹೀರಾತು,ಸಿನಿಮಾ ಇನ್ನಿತರ ಪುಟಗಳ ನಡುವೆ ಪ್ರತಿನಿತ್ಯ ನೂರಾರು ಸುದ್ದಿಗಳನ್ನು ಸಂಗ್ರಹಿಸಿ ತನ್ನ ಓದುಗರಿಗೆ ನೀಡುತ್ತಿರುವುದರ ಹಿಂದಿನ ಪರಿಶ್ರಮ ಮಹತ್ವದ ಹೊಣೆಗಾರಿಕೆ ಯಾಗಿದೆ.ಜೊತೆಗೆ ಪತ್ರಕರ್ತರು ಸಮಾಜವನ್ನು ಎಚ್ಚರಿಸುವ, ಕೆಲವೊಮ್ಮೆ ಚಾಟಿ ಬೀಸುವ ಕೆಲಸವನ್ನೂ ಮಾಡುತ್ತಾ, ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.
ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಾಧ್ಯಮಗಳಲ್ಲೂ ಬದಲಾವಣೆ ಯಾಗಿದೆ.ಪತ್ರಿಕಾ ಮಾಧ್ಯಮ ಗಳ ಜೊತೆ ಟಿ.ವಿ ಮಾಧ್ಯಮ ಗಳು ಅವುಗಳಿಗಿಂತಲೂ ಸಾಮಾಜಿಕ ಮಾಧ್ಯಮಗಳು ಇನ್ನೂ ವೇಗವಾಗಿ ಸಮಾಜದಲ್ಲಿ ಜನರ ನಡುವೆ ಕಾರ್ಯ ನಿರ್ವಹಿಸುತ್ತಿದೆ ಎ೦ದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಎಸ್.ಭಟ್ ,ದೀಪಕ್ ಅಟವಳೆ ,ಉದಯ ಶಂಕರ ನೀರ್ಪಾಜೆ,.ರಾಮಕೃಷ್ಣ ಭಟ್ ,ಜಯಂತ ಉಳ್ಳಾಲ,ಶಶಿಧರ ಪೊಯ್ಯತ್ತ ಬೈಲು, ಅಶೋಕ್ ಶೆಟ್ಟಿ ಬಾಳ.ಬಿ.ರವೀಂದ್ರ ಶೆಟ್ಟಿ ,ಪ್ರಕಾಶ್ ಸುವರ್ಣ,ಸಲೀಮ್ ಬೋಳಂಗಡಿ,ಶರತ್ ಸಾಲ್ಯಾನ್ ,ಎಚ್.ಎಸ್.ಮಂಜುನಾಥ,ರಾಜೇಶ್ ಕದ್ರಿ, ಭಾಗ್ಯವಾನ್ ಸುನೀಲ್ ಅವರನ್ನು ಸನ್ಮಾನಿಸಲಾಯಿತು.
ಮಾಧ್ಯಮ ಯುವ ಜನ ಗೋಷ್ಠಿಯಲ್ಲಿ ಪತ್ರಕರ್ತರಾದ ಮೊಹಮ್ಮದ್ ಆರಿಫ್ ಪಡುಬಿದ್ರೆ,ಸಂಧ್ಯಾ ಹೆಗಡೆ,ಅನಿಲ್ ಶಾಸ್ತ್ರಿ ವಿಷಯ ಮಂಡಿಸಿದರು. ಅನ್ನಪೂರ್ಣೇಶ್ವರಿ ಅಂಧ ಕಲಾವಿದರ ಸಂಗೀತ ಕಾರ್ಯಕ್ರಮ ನಡೆಯಿತು.ಭಾಸ್ಕರ್ ಕಟ್ಟ ಕಾರ್ಯಕ್ರಮ ಸಂಯೋಜಿಸಿದರು. ತಾಲೂಕಿನ ಅಧ್ಯಕ್ಷ ರು ಪದಾಧಿಕಾರಿ ಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.ಸೀತಾರಾಮ ಆಚಾರ್ಯ ಮೂಡುಬಿದಿರೆ, ಮೌನೇಶ್ ವಿಶ್ವಕರ್ಮ ಬಂಟ್ವಾಳ,ಶಶಿಧರ ಪೊಯ್ಯತ್ತಬೈಲ್ ಉಳ್ಳಾಲ,ಸಿದ್ಧಿಕ್ ನೀರಾಜೆ ಪುತ್ತೂರು,ವಿಜಯ ಕುಮಾರ್ ಪೆರ್ಲ ಕಡಬ ಭಾಗವಹಿಸಿದ್ದರು.ಸಮ್ಮೇಳನ ದ ಸರ್ವಾಧ್ಯಕ್ಷ ಶಿವ ಸುಬ್ರಹ್ಮಣ್ಯ ಸಮಾರೋಪ ಸಮಾರಂಭದ ಪ್ರತಿಕ್ರಿಯೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ,ಉದ್ಯಮಿ ರಮೇಶ್ ನಾಯಕ್,ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಸಭಾಪತಿ ಸಿ.ಎ. ಶಾಂತಾರಾಮ ಶೆಟ್ಟಿ ಬಲ್ಮಠ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ,ಡಾ.ಜಗದೀಶ್ ಬಾಳ,ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಅಧ್ಯಕ್ಷ ರಾಘವೇಂದ್ರ ಹೊಳ್ಳ,ನಮ್ಮ ಕುಡ್ಲಾ ವಾಹಿನಿಯ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರಾ, ತಾಲೂಕು ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾ ರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles