27.8 C
Karnataka
Friday, January 10, 2025

ಕದ್ರಿಪಾರ್ಕ್‌ನಲ್ಲಿ ಬೃಹತ್ ದ್ರಾಕ್ಷಾ ರಸ ( ವೈನ್) ಮೇಳ

ಮಂಗಳೂರು: ರತ್ನಾ’ಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (ಸರ್ಕಾರಿ ಸ್ವಾಮ್ಯದ ಸಂಸ್ಥೆ), ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಡಿ.7 ಹಾಗೂ 8ರಂದು ಕದ್ರಿಪಾರ್ಕ್ ಮಂಗಳೂರಿನಲ್ಲಿ ದ್ರಾಕ್ಷಾ ರಸ ಪ್ರದರ್ಶನ, ಮಾರಾಟ ಹಾಗೂ ಬೃಹತ್ ವೈನ್ ಮೇಳ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಬೆಳೆಗೆ ಉತ್ತಮ ಬೇಡಿಕೆ ಹಾಗೂ ಬೆಲೆ ಸಿಗುವ ಉದ್ದೇಶಕ್ಕಾಗಿ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ, ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಹಾಗೂ ಕರ್ನಾಟಕದ ವೈನರಿಗಳ ಸಹಕಾರದೊಂದಿಗೆ ದ್ರಾಕ್ಷಾ ರಸದ ಉತ್ಪಾದನೆ, ದಾಸ್ತಾನು ಹಾಗೂ ದ್ರಾಕ್ಷಾ ರಸದ ಪೇಯವನ್ನು ಸವಿಯುವ ವಿಧಾನ ಮಾತ್ರವಲ್ಲ, ಇದು ಉತ್ತಮ ಆರೋಗ್ಯಕರ ಪಾನೀಯವಾಗಿರುವುದರಿಂಧ ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ. ‘ಪ್ರದರ್ಶನ-ಸವಿಯುವಿಕೆ-ಮಾರಾಟ’ ಎಂಬ ಘೋಷವಾಕ್ಯದೊಂದಿಗೆ ವೈನ್ ಮೇಳ ಆಚರಿಸಲ್ಪಡುತ್ತಿದ್ದು ದ್ರಾಕ್ಷಾ ರಸ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯಾಕರ್ಷಕ ದರ ಹಾಗೂ ಅತ್ಯುತ್ತಮ ಕೊಡುಗೆಗಳೊಂದಿಗೆ ಮಾರಾಟವನ್ನು ಏರ್ಪಡಿಸಲಾಗಿದೆ.

ವೈನ್ ಸೇವನೆ ಆರೋಗ್ಯಕರ

ಮೇಳದಲ್ಲಿ ಮಧ್ಯಸಾರ ರಹಿತ ವೈನ್‌ಗಳಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್‌ನ ವೈನ್‌ಗಳು ಮೇಳದಲ್ಲಿವೆ. ವೈನ್ ಸೇವನೆಯಿಂದ ಹತ್ತು ಹಲವು ಆರೋಗ್ಯಕರ ಲಾಭಗಳಿರುವ ಬಗ್ಗೆ ಜರ್ನಲ್ ನೇಚರ್ ಎಂಬ ವರದಿಯಲ್ಲಿ ಪ್ರಕಟಗೊಂಡ ಅಧ್ಯಯನದಲ್ಲಿ ಈ ಬಗ್ಗೆ ಸಾಬೀತು ಮಾಡಲಾಗಿದೆ. ಸಾಂಪ್ರದಾಯಿಕವಾಗಿ ತಯಾರಾದ ರೆಡ್‌ವೈನ್‌ನಲ್ಲಿ ರೆಸ್ವೆರಾಟ್ರೋಲ್ ಮತ್ತು ಫ್ಲೇವನಾಯ್ಡ ಗಳ ಅಂಶ ಹೆಚ್ಚಿರುತ್ತದೆ. ಇವುಗಳು ಹೃದಯದ ಆರೋಗ್ಯವನ್ನು ಚೆನ್ನಾಗಿ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ವೈನ್‌ನ ನಿಯಮಿತ ಸೇವನೆಯಿಂದ ನೋಡುವವರ ಕಣ್ಣಿಗೆ ಸದಾ ಯೌವನಭರಿತರಾಗಿ ಕಾಣಿಸುವುದರ ಜೊತೆಗೆ ಆಯಸ್ಸು ಕೂಡ ಹೆಚ್ಚಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಿ ರಕ್ತದ ಚಲನೆಯ ಸಮತೋಲನವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.
2 ದಿನಗಳ ವರೆಗೆ ನಡೆಯುವ ಈ ದ್ರಾಕ್ಷಾ ರಸ ಪ್ರದರ್ಶನ, ಮಾರಾಟ ಹಾಗೂ ಬೃಹತ್ ವೈನ್ ಮೇಳದಲ್ಲಿ ದೇಶಿಯ, ವಿದೇಶಿಯ ವೈನ್ ಬ್ರಾಂಡಿನ ಪರಿಚಯ, ವೈನ್‌ನ ಆರೋಗ್ಯಕರ ಉಪಯೋಗ, ವೈನ್‌ನ ಉತ್ಪಾದನಾ ವಿಧಾನ ಹಾಗೂ ಬಳಕೆ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles