ಮಂಗಳೂರು:ಜನ್ಮಜಾತವಾಗಿ ಜಾತಕಗಳಲ್ಲಿ ಗ್ರಹಗಳ ಸ್ಥಾನಾಂತರದಿಂದ ಹಲವು ದೋಷಗಳು ಗೋಚರಿಸುತ್ತವೆ.ಇದರಿಂದಾಗಿ ಪ್ರಕೃತಿಸಹಜವಾದ ಸಂಕಷ್ಟಗಳು ಮತ್ತು ತೊಂದರೆಗಳು ಮನುಷ್ಯರನ್ನು ಬಾಧಿಸುತ್ತವೆ.ಅದಕ್ಕಾಗಿ ಕಾಲಕಾಲಕ್ಕೆ ದೋಷ ನಿವಾರಣಾ ಪೂಜೆಗಳನ್ನು ಮಾಡಿಸುವುದು ಸೂಕ್ತ ಎಂದು ಮಾತಾ ಅಮೃತಾನಂದಮಯಿ ಮಠದ ಹಿರಿಯ ಸ್ವಾಮೀಜಿಗಳಾದ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿ ಹೇಳಿದರು.
ಮಂಗಳೂರು ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ನೂತನವಾಗಿ ಆರಂಭಿಸಲಾದ ಶನಿ ದೋಷ ನಿವಾರಣಾ ಪೂಜೆಯನ್ನು ದೀಪ ಬೆಳಗಿಸಿ ಚಾಲನೆ ನೀಡಿ ಸ್ವಾಮೀಜಿ ಆಶೀರ್ವಚನವಿತ್ತರು.
ನವಗ್ರಹಗಳಲ್ಲಿ ಶನಿಗ್ರಹದ ಪ್ರಭಾವವು ಜೀವಿಗಳ ಮೇಲೆ ಅಧಿಕವಾಗಿದ್ದು ಆ ಗ್ರಹಗಳ ಪ್ರೀತ್ಯರ್ಥವಾಗಿ ಸಾಮೂಹಿಕ ಪೂಜೆ ಕೈಗೊಂಡಾಗ ಅದರ ಪ್ರಭಾವವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರಾದ ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣ ಉಪಸ್ಥಿತರಿದ್ದರು.
ಸ್ವಾಮೀಜಿಯವರನ್ನು ಬ್ರಹ್ಮಸ್ಥಾನ ಕ್ಷೇತ್ರಾಭಿವೃದ್ಧಿ ಸಮಿತಿಯ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು.ಈ ಸಂದರ್ಭದಲ್ಲಿ ಡಾ. ಜೀವರಾಜ್ ಸೊರಕೆ, ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್, ಭೋಜರಾಜ್ ಕರ್ಕೇರ,ಶ್ರುತಿ ಸನತ್ ಹೆಗ್ಡೆ,ಶ್ರೀ ಮುರಳೀಧರ್ ಶೆಟ್ಟಿ,ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೈ. ಎನ್. ಸಾಲ್ಯಾನ್,ಉಪಾಧ್ಯಕ್ಷರಾದ ಕೃಷ್ಣಶೆಟ್ಟಿ,ಸುಧಾಕರ ಭಟ್,ಸಂಘಟನಾ ಕಾರ್ಯದರ್ಶಿ ಯೋಗೀಶ್ ಸಾಲ್ಯಾನ್, ಕಾರ್ಯದರ್ಶಿ ಡಾ. ದೇವದಾಸ್ ಪುತ್ರನ್ , ರಾಮನಾಥ್ , ದೀಪಕ್ ಶೆಟ್ಟಿಗಾರ್, ಪ್ರಕಾಶ್ ಕರ್ಕೇರ ಮತ್ತು ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸಲಹೆಗಾರರಾದ ಡಾ.ವಸಂತಕುಮಾರ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಡಿದರು.ಪ್ರತಿ ತಿಂಗಳ ಎರಡನೆಯ ಶನಿವಾರ ಸಂಜೆ ಈ ದೋಷ ನಿವಾರಣೆ ಪೂಜೆ ಮುಂದುವರಿಯಲಿದೆ.