27.2 C
Karnataka
Friday, January 10, 2025

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದಿಂದ ರಾಷ್ಟ್ರೀಯ ವೀರ ಬಾಲ ದಿನ ಆಚರಣೆ

ಮ೦ಗಳೂರು: ಸಿಖ್ ಗುರು ಶ್ರೀ ಗುರು ಗೋವಿಂದ ಸಿಂಗ್ ಅವರ ಮಕ್ಕಳಾದ ಸಾಹಿಬ್ ದಾದಾ ಜೋರಾವರ್ ಸಿಂಗ್ ಮತ್ತು ಸಾಹಿಬ್ ದಾದಾ ಬಾಬಾ ಫತೇರ್ ಸಿಂಗ್ ಅವರುಗಳು ವೀರ ಮರಣವನ್ನಪ್ಪಿದ ದಿನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ “ರಾಷ್ಟ್ರೀಯ ವೀರ ಬಾಲ ದಿನವನ್ನು” ಅಟಲ್ ಸೇವಾ ಕೇಂದ್ರದಲ್ಲಿ ಆಚರಿಸಲಾಯಿತು.

ವೀರ ಬಾಲಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಮೊಘಲರ ಅಟ್ಟಹಾಸವನ್ನು ಎದುರಿಸಿ ಮತಾಂತರಕ್ಕೆ ಒಪ್ಪದೇ ಬಲಿದಾನಗೈದ ಇಂತಹ ವೀರ ಸುಪುತ್ರರ ತ್ಯಾಗವನ್ನು ಸದಾ ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿಜಿ ಅವರು ನೀಡಿದ ಕರೆಯಂತೆ ದೇಶಾದ್ಯಂತ ರಾಷ್ಟ್ರೀಯ ವೀರ ಬಾಲ ದಿನವನ್ನು ಆಚರಿಸಲಾಗುತ್ತಿದೆ. ದಾಳಿಕೋರ ಔರಂಗಜೇಬನ ಜೀವ ಬೆದರಿಕೆಗೆ ಜಗ್ಗದೇ ಪ್ರಾಣಾರ್ಪಣೆ ಮಾಡಿದ್ದ ಈ ಪುಟ್ಟ ಬಾಲಕರ ಧೈರ್ಯ ಶೌರ್ಯ ನಮ್ಮೆಲ್ಲರಿಗೂ ಪ್ರೇರಣೆ ಎಂದರು.

ಖರ್ವಿಂದರ್ ಸಿಂಗ್ ಅವರು ಮಾತನಾಡಿ ಆ ವೀರ ಮಕ್ಕಳ ಕಣ್ಣುಗಳಲ್ಲಿದ್ದ ಔರಂಗಜೇಬ್ ವಿರುದ್ಧದ ಜ್ವಾಲೆ, ಎಂಥವರನ್ನೂ ಒಂದು ಕ್ಷಣ ಪ್ರಭಾವಿಸುತ್ತದೆ. ಎಂತೆಂತಹ ಆಮಿಷಗಳನ್ನು ಒಡ್ಡಿದರೂ ಮತಾಂತರಕ್ಕೆ ಒಪ್ಪದೇ ದೇಶ ಹಾಗೂ ಧರ್ಮಕ್ಕಾಗಿ ಹೋರಾಡಿ ಅಮರರಾದರು ಎಂದು ಬಾಲಕರನ್ನು ಹೆಮ್ಮೆಯಿಂದ ಸ್ಮರಿಸಿದರು.

ಈ ಸಂದರ್ಭದಲ್ಲಿ ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಗುರುಸಿಂಗ್ ಸಭಾ ಗುರುದ್ವಾರದ ಅಧ್ಯಕ್ಷರಾದ ಶ್ರೀ ಜಿತೇಂದ್ರ ಸಿಂಗ್, ಶ್ರೀ ಅಮರ್ ಜೀತ್ ಸಿಂಗ್, ನಿತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles