29.3 C
Karnataka
Wednesday, January 22, 2025

ಉಸ್ತುವಾರಿ ಸಚಿವರ ಪ್ರವಾಸ

ಮ೦ಗಳೂರು: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜನವರಿ 17 ಮತ್ತು 18 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.

ಶುಕ್ರವಾರ ಬೆಳಗ್ಗೆ 10:30 – ಮಂಗಳೂರು ವಿಮಾನ ನಿಲ್ದಾಣ ಆಗಮನ, 11.30- ಮೇರಿಹಿಲ್‍ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡ ಶಿಲಾನ್ಯಾಸ, 12:15 – ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ – ಕರ್ನಾಟಕ ಸುವರ್ಣ ಸಂಭ್ರಮ 50 ಉದ್ಘಾಟನಾ ಕಾರ್ಯಕ್ರಮ, 3 ಗಂಟೆ- ಮೂಡುಬಿದಿರೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ, 3.45- ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ ಕಚೇರಿ ಭೇಟಿ, ‌ಸಂಜೆ 5 ಗಂಟೆಗೆ ಮಂಗಳ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನಾ ಸಮಾರಂಭ, ರಾತ್ರಿ ನಗರದಲ್ಲಿ ವಾಸ್ತವ್ಯ.
ಜ.18 ರಂದು ಬೆಳಿಗ್ಗೆ 10- ಬೆಳ್ತಂಗಡಿ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಶಂಕುಸ್ಥಾಪನೆ, 11- ಬೆಳ್ತಂಗಡಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಉದ್ಘಾಟನೆ, 12.30- ಬೆನಕ ಆರೋಗ್ಯ ಕೇಂದ್ರ ತುರ್ತು ಚಿಕಿತ್ಸಾ ವಿಭಾಗ ಉದ್ಘಾಟನೆ, 4- ತಣ್ಣೀರುಬಾವಿ ಬೀಚ್ ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ, ಸಂಜೆ 5- ಪುರಭವನದಲ್ಲಿ ಬ್ಯಾರೀಸ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ,
6 ಗಂಟೆಗೆ ವಿಮಾನದ ಮೂಲಕ ಸಚಿವರು ಬೆಂಗಳೂರಿಗೆ ಹಿಂದಿರುಗುವರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles