25.9 C
Karnataka
Wednesday, January 22, 2025

ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ತುಳು ಸಿನಿಮಾಕ್ಕೆ ಮುಹೂರ್ತ

ಮಂಗಳೂರು: ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ರೋಶನ್ ಆರ್ ಆಳ್ವ ನಿರ್ದೇಶನದ ನೂತನ ತುಳು ಚಿತ್ರದ ಮುಹೂರ್ತ ಸಮಾರಂಭ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು. ಆರಂಭದಲ್ಲಿ ಸ್ಕ್ರಿಪ್ಟ್ ಪೂಜೆಯು ನೆರವೇರಿತು. ಆರ್ ಜೆ ಪ್ರೊಡಕ್ಷನ್‌ನ ರಮೇಶ್ ಆಳ್ವ ತಿಂಬರ ಮತ್ತು ಜಯಶ್ರೀ ಆರ್ ಆಳ್ವ ತಿಂಬರ ಕ್ಯಾಮೆರಾ ಚಾಲನೆಗೈದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿಗಳಾದ ಸಂಜೀವ ಶೆಟ್ಟಿ ತಿಂಬರ ಮುಂಬೈ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ನಾರಾಯಣ ಹೆಗ್ಡೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಯಮಿ ಸೀತಾರಾಮ ಶೆಟ್ಟಿ ತಿಂಬರ, ನೀರಜ್ ಶೆಟ್ಟಿ, ಮಂಗಲ್ಪಾಡಿ ಪಂಚಾಯತ್ ನ ಮಾಜಿ ಸದಸ್ಯರಾದ ವಲ್ಸರಾಜ್, ಪಿಎನ್ ಆರ್ ಪ್ರೊಡಕ್ಷನ್‌ನ ರಾಘವೇಂದ್ರ ಹೊಳ್ಳ ತಿಂಬರ ಹಾಗೂ ಇತರರು ಉಪಸ್ಥಿತರಿದ್ದರು.
ನಿರ್ದೇಶಕರಾದ ರೋಷನ್ ಆರ್ ಆಳ್ವ ತಿಂಬರ, ಛಾಯಾಗ್ರಾಹಕ ಅರುಣ್ ರೈ ಪುತ್ತೂರು, ನಾಯಕ ನಟ ನವೀನ್, ನಾಯಕಿ ಅಮೃತ ಹಾಗೂ ಇತರ ಕಲಾವಿದರು ಹಾಗೂ ತಂತ್ರಜ್ಞರು ಹಾಜರಿದ್ದರು. ಹರ್ಷರಾಜ್ ನಾವೂರು ಕಾರ್ಯಕ್ರಮವನ್ನು ನಿರೂಪಿಸಿದರು. ಚಿತ್ರದಲ್ಲಿ ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು, ಪುಷ್ಪರಾಜ್ ಬೊಳ್ಳಾರ್ ಸೇರಿದಂತೆ ಹಲವು ತುಳು ಮತ್ತು ಕನ್ನಡ ಚಲನಚಿತ್ರ ತಾರೆಯರು ಬಣ್ಣ ಹಚ್ಚಲಿದ್ದಾರೆ ಎಂದು ಚಿತ್ರದ ನಿರ್ದೇಶಕ ರೋಶನ್ ಆರ್ ಆಳ್ವ ಮಾಹಿತಿ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles