25.9 C
Karnataka
Wednesday, January 22, 2025

ದಿ.ಲೋಕಯ್ಯ ಶೆಟ್ಟಿಯವರ ದೇಶಪ್ರೇಮ ಸದಾ ಪ್ರೇರಣೆ:ಸತೀಶ್ ಪೈ

ಮಂಗಳೂರು : ಹದಿ ಹರೆಯದಲ್ಲೇ ಕೆಚ್ಚೆದೆಯಿಂದ ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ದಿ.ಲೋಕಯ್ಯ ಶೆಟ್ಟಿ ಅವರ ದೇಶಪ್ರೇಮ ಸಮಾಜಕ್ಕೆ ಪ್ರೇರಣೆಯಾಗಿದೆ. ಶಾಸಕರಾಗಿ, ಕಾರ್ಮಿಕ ನಾಯಕರಾಗಿ, ಕ್ರೀಡಾ
ಸಂಘಟಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಲೋಕಯ್ಯ ಶೆಟ್ಟಿ ಅವರ ಮೇರು ವ್ಯಕ್ತಿತ್ವ ಸದಾ ಸ್ಮರಣೀಯ ಎಂದು ಭಾರತ್ ಬೀಡಿ ವರ್ಕ್ಸ್ ಸಮೂಹ ಸಂಸ್ಥೆಯ ನಿರ್ದೇಶಕ ಸತೀಶ್ ಪೈ ಹೇಳಿದರು.
ದಿ.ಎಂ.ಲೋಕಯ್ಯ ಶೆಟ್ಟಿ ಅವರ 22ನೇ ವರ್ಷದ ಸಂಸ್ಮರಣಾರ್ಥ ದಿ.ಎಂ.ಲೋಕಯ್ಯ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಎ.ಜೆ.ಆಸ್ಪತ್ರೆಯ ಸಹಯೋಗದಲ್ಲಿ ನಗರದ ಮಣ್ಣಗುಡ್ಡೆಯ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಚಿತ ದಂತ ಹಾಗೂ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ಪ್ರಾಧ್ಯಾಪಕ ಡಾ.ರೋಷನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೇತ್ರ ತಜ್ಞಡಾ.ಜಯರಾಮ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಉದ್ಯಮಿ ಗಣೇಶ್ ಶೆಟ್ಟಿ, ಮಣ್ಣಗುಡ್ಡೆ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಂ.ಲೋಕಯ್ಯ ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಕಿಶೋರ್‌ಚಂದ್ರ ಶೆಟ್ಟಿ, ನಿರ್ದೇಶಕರಾದ ಸತೀಶ್‌ಚಂದ್ರ ಶೆಟ್ಟಿ, ಡಾ.ಧೀರಜ್, ಪ್ರಶಾಂತ್ ಶೆಟ್ಟಿ, ಡಾ.ಶ್ರವಣ್ ಶೆಟ್ಟಿ, ಶೋಧನ್ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶಾಲಾ ಸಲಕರಣೆಗಳನ್ನು ವಿತರಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಶಾಲೆಯ ಸಹ ಶಿಕ್ಷಕ ಸುಬ್ರಮಣ್ಯ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles