21.1 C
Karnataka
Wednesday, January 22, 2025

ಅಡ್ಯಾರ್ ಗಾರ್ಡನ್ ನಲ್ಲಿ ರೋಟರಿ ಜಿಲ್ಲಾ ಸಮ್ಮೇಳನ ” ನವ ವೈಭವ ” .

ಮ೦ಗಳೂರು: ಮಡಿಕೇರಿ, ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ, 3181ರ ಜಿಲ್ಲಾ ಸಮಾವೇಶ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ರವರ ನೇತೃತ್ವದಲ್ಲಿ ಜನವರಿ 24, 25 ಮತ್ತು 26ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎ೦ದು ಕಾನ್ಫರೆನ್ಸ್ ಛೇರ್ಮನ್ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಪತ್ರಿಕಾ ಗೋಷ್ಠಿಯಲ್ಲಿಯಲ್ಲಿ ತಿಳಿಸಿದರು.

ಜ.24 ರಂದು ಸ೦ಜೆ 4:30 ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ರೋಟರಿಯ ದತ್ತಿ ನಿಧಿಯ ಟ್ರಸ್ಟಿಗಳಾಗಿರತಕ್ಕಂತಹ ಭರತ್ ಪಾಂಡ್ಯ ರವರು ಹಾಗೂ ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿಯಾಗಿರುವ ಬಾಲಮೂರ್ತಿ ಅವರು ಆಗಮಿಸುತ್ತಿರುವುದು ವಿಶೇಷವಾಗಿದೆ,ಮುಖ್ಯ ಭಾಷಣಕಾರರಾಗಿ ಡಾ.ಬಾಲಸುಬ್ರಮಣ್ಯಂ ಬಾಗವಹಿಸಲಿದ್ದಾರೆ. ಅಂದು ಸಾಯಂಕಾಲ ಕಾರ್ಯಕ್ರಮದಲ್ಲಿ ಆಕರ್ಷಣೆಯಾಗಿ ಕಾಂತರಾ ಚಿತ್ರದ ನಟಿಯಾಗಿರುವಂತಹ ಮಾನಸಿ ಸುದೀರ್ ಹಾಗೂ ಪ್ರಸಿದ್ಧ ಜಾದುಗಾರ ಕುದ್ರೊಳಿ ಗಣೇಶ ಅವರಿಂದ ಸಭಿಕರನ್ನು ರಂಜಿಸುವ ಕಾರ್ಯಕ್ರಮ ನಡೆಯಲಿದೆ.
25ರ ಎರಡನೇ ದಿನದಂದು ವಿಶೇಷ ಆಕರ್ಷಣೆಯಾಗಿ ಭಾರತೀಯ ನೌಕಾದಳದ ವೈಸ್‌ ಆಡ್ಮಿರಲ್‌ ಪ್ರವೀಣ್ ನಾಯರ್ ರವರು, ರಾಮಕೃಷ್ಣ ಮಠ ಅಲೆಪ್ಪಿಯ ಸ್ವಾಮಿ ವೀರಭದ್ರಾನಂದ್ ಜಿ ಮೈ೦ಡ್‌ ಮೂವರ್ಸ್‌ ನ ಸ್ಥಾಪಕ ಜಯಪ್ರಕಾಶ್ ಕಾಬ್ರ, ವಂದೇ ಭಾರತ್ ನ ಸಿಇಓ ಸುಧಾಂಶು ಮಣಿ,ಅಂತರಾಷ್ಟ್ರೀಯ ಯೂತ್ ಫೆಸ್ಟ ವಿನ್ನರ್ ಆಗಿರತಕ್ಕಂತಹ ಆದ್ಯ ದೀಕ್ಷಿತ್ ಬಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರಂಗ ಕಲಾವಿದೆ ಶ್ವೇತಾ ಅರೆಹೊಳೆ ಕಾರ್ಯಕ್ರಮ ನಡೆಸಲಿಕೊಡಲಿದ್ದಾರೆ.
26ರ ಮೂರನೇ ದಿನದಂದು ಗಣರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ 8.30 ಕ್ಕೆ ಕರ್ನಲ್ ಭಂಡಾರಿ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಈ ದಿನದಂದು ವಿವೇಕಾನಂದ ಯೂಥ್ ಮೂವ್ಮೆಂಟ್ ಸಿಇಓ ಪ್ರವೀಣ್ ಕುಮಾರ್ ಸಯ್ಯಪ್ಪ ರಾಜು, ಮಾನಸಿಕ ತಜ್ಞಅಕ್ಷರ ದಾಮ್ಲೆ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜಿನ ಡಾ. ಪ್ರಭಾ ಅಧಿಕಾರಿ ಅವರು ಬಾಗಿವಹಿಸಲಿದ್ದಾರೆ. ಮೂರು ದಿನಗಳ ಈ ಅಭೂತಪೂರ್ವ ಸಮಾವೇಶದಲ್ಲಿ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಅತ್ಯಮೂಲ್ಯವಾದ ಸೇವೆ ಸಲ್ಲಿಸುತ್ತಿರುವ ಆರು ಜನ ಮಹನೀಯರನ್ನು ಗೌರವಿಸುವಂತಹ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ರೋಟರಿಯಲ್ಲಿ 50 ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸುತ್ತಿರುವ ಹಿರಿಯ ರೊಟೇರಿಯನ್ ಗಳವರನ್ನು ಕೂಡ ಗೌರವಿಸಲಾಗುವುದು.

ವಿಕ್ರ0ದತ್ತ ರೋಟರಿ ಜಿಲ್ಲಾ ಗವರ್ನರ್, ರಿತೇಶ್ ಬಾಳಿಗ ಜಿಲ್ಲಾ ಕಾರ್ಯದರ್ಶಿ, ಗೋಪಾಲಕೃಷ್ಣ ಶೆಟ್ಟಿ ಕಾರ್ಯದರ್ಶಿ ಜಿಲ್ಲಾ ಕಾನ್ಫರೆನ್ಸ್, ಗೀತಾನಂದ ಪೈ ಕೋಶಾಧಿಕಾರಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles