ಮ೦ಗಳೂರು: ನಿಟ್ಟೆ ಇನ್ಸ್’ಟಿಟ್ಯೂಟ್ ಆಫ್ ಪ್ರೊಫೆಷನಲ್ಸ್ (NIPE), ಗ್ಲೋಬಲ್ ಗ್ಯಾನ್ ಅಕಾಡೆಮಿ, ಮಂಗಳೂರು ನಗರ ಪೊಲೀಸರು ಮತ್ತು ಸಿಟಿ ಸೆಂಟರ್ ಮಂಗಳೂರು, ಲಯನ್ಸ್ ಕ್ಲಬ್ ಮಂಗಳೂರು ಮತ್ತು ಶಾಶ್ವತ ಸೇವಾ ಫೌಂಡೇಶನ್ ಇವರ ಸಹಯೋಗದಲ್ಲಿ ಮಾದಕವಸ್ತು ಬಳಕೆಯ ಅಪಾಯಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವುದಕ್ಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎ೦ದು ಅಧ್ಯಾಪಕ , ಸಂಯೋಜಕ ಕಿಶೋರ್ ಎಸ್ . ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.
.
ಜನವರಿ 25ರ೦ದು ಸ೦ಜೆ 4ಗೆ ಮಂಗಳೂರಿನ ಸಿಟಿ ಸೆಂಟರ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರ ಪ್ರಾಥಮಿಕ ಉದ್ದೇಶವೆಂದರೆ ಮಾದಕ ವಸ್ತುಗಳ ಬಳಕೆಯ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸುವುದು, ಸೃಜನಶೀಲ ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಆರೋಗ್ಯಕರ ಜೀವನಶೈಲಿಯ ಆಯ್ಕೆಗಳನ್ನು ಪ್ರೇರೇಪಿಸುವುದು ಎ೦ದವರು ಹೇಳಿದರು.
ಕಾರ್ಯಕ್ರಮದ ಪ್ರಮುಖ ಅಂಶಗಳು:
ನೃತ್ಯ ನಾಟಕ: ಪ್ರೇಕ್ಷಕರನ್ನು ಶಿಕ್ಷಿತಗೊಳಿಸುವ ಮತ್ತು ಪ್ರೇರೇಪಿಸುವ ಗುರಿಯೊಂದಿಗೆ ಮಾದಕ ದ್ರವ್ಯ ಬಳಕೆಯ ಕಠೋರ ವಾಸ್ತವತೆಗಳು ಮತ್ತು ಅದರ ಪರಿಣಾಮಗಳ ಪ್ರದರ್ಶನ.
ಸ್ಪರ್ಧೆಗಳು:ಮೈಂಡ್ ಮೇಝ್ (ಕ್ವಿಜ್): ಸಾಮಾನ್ಯ ಜ್ಞಾನ ಮತ್ತು ಪ್ರಸಕ್ತ ವಿಚಾರಗಳ ಬಗ್ಗೆ ಸವಾಲು, ತಂಡದ ಸ್ವರೂಪದಲ್ಲಿ ನಡೆಯುವ ಸ್ಪರ್ಧೆ. ಟರ್ನ್ ಕೋಟ್ ಸ್ಪರ್ಧೆ: ಚರ್ಚೆ ಸ್ಪರ್ಧೆ, ಹೀಗಾಗಿ ಭಾಗವಹಿಸುವವರು ವಿಷಯವನ್ನು ಸಕಾರಾತ್ಮಕ ಮತ್ತು ವಿರೋಧಾತ್ಮಕವಾಗಿ ಮಂಡಿಸಲು ತಮ್ಮ ಬಹುಮುಖ ಚಿಂತನೆಗಳನ್ನು ತೋರಿಸಬಹುದು.ಘೋಷಣೆ ರಚನೆ ಸ್ಪರ್ಧೆ: ಪ್ರತಿ ಭಾಗವಹಿಸುವವರಿಗೆ 15 ಪದಗಳಲ್ಲಿ ಪರಿಣಾಮಕಾರಿ ಸಂದೇಶವನ್ನು ವ್ಯಕ್ತಪಡಿಸಲು ಸೃಜನಶೀಲ ವೇದಿಕೆ.
ಪ್ರತಿಕಾಗೋಷ್ಠಿಯಲ್ಲಿ ಶಬರಿ ಶೆಟ್ಟಿ (ಅಧ್ಯಾಪಕ ಸಂಯೋಜಕಿ),ಡಾ ರುಖ್ಸಾನಾ ಹಾಸನ, ಗ್ಲೋಬಲ್ ನಾಲೆಡ್ಜ್ ಅಕಾಡೆಮಿ, ಎನ್ ವಿ ಪೌಲೋಸ್, ಗ್ಲೋಬಲ್ ಟಿವಿ,ಕೃಷ್ಣನಾಡು ಪ್ರಶಾಂತ್ (ವಿದ್ಯಾರ್ಥಿ ಸಂಯೋಜಕರು),
ಕೀರ್ತಿ ಪೂಜಾರಿ (ವಿದ್ಯಾರ್ಥಿ ಸಂಯೋಜಕರು), ಅನನ್ಯಾ ಲಕ್ಷ್ಮಿ ಬನನ್ (ವಿದ್ಯಾರ್ಥಿ ಸಂಯೋಜಕಿ) ಉಪಸ್ಥಿತರಿದ್ದರು.
