ಮಂಗಳೂರು,ಫೆ.8;ಆರೋಗ್ಯಕರ ಜೀವನಕ್ಕೆ ಸಂಗೀತ ಕಲೆ ಪೂರಕವಾಗಿದೆ ಎಂದು ಮಾಜಿ ಸಚಿವ ಕಷ್ಣ ಜೆ ಪಾಲೆಮಾರ್ ತಿಳಿಸಿದ್ದಾರೆ.
ಅವರು ಮಂಗಳೂರಿನ ಕಲಾ ಸಾಧನಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಹಮ್ಮಿಕೊಂಡ ಸ್ವರ ಸಾನಿಧ್ಯ ರಾಷ್ಟ್ರೀಯ ಮಟ್ಟದ ಯುವ ಸಂಗೀತ ಉತ್ಸವದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು..
ಯುವ ಪೀಳಿಗೆಯಲ್ಲಿ ಸಂಗೀತದ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಸ್ವರ ಸಾನಿಧ್ಯ ರಾಷ್ಟ್ರೀಯ ಸಂಗೀತೋತ್ಸವ ಗಮನಾರ್ಹ ವಾಗಿದೆ.ಸಂಗೀತಕ್ಕೆ ಅದ್ಭುತ ವಾದ ಶಕ್ತಿಯಿದೆ.ಪಶು ಪಕ್ಷಿಗಳು, ಗಿಡಗಳು ಸಂಗೀತಕ್ಕೆ ಸ್ಪಂಧಿಸುತ್ತವೆ ಎನ್ನುವುದನ್ನು ಕೇಳಿದ್ದೇನೆ.ಮನುಷ್ಯನ ಆರೋಗ್ಯದ ಮೇಲೂ ಸಂಗೀತ ಕೇಳುವುದರಿಂದ ಉತ್ತಮ ಪರಿಣಾಮ ಬೀರುತ್ತದೆ. ಸಂಗೀತದ ಬಗ್ಗೆ ಸಮಾಜದಲ್ಲಿ ಅದರಲ್ಲೂ ಯುವ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ವೇದವ್ಯಾಸ ಕಾಮತ್,ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉದ್ಯಮಿ ಪುಷ್ಪರಾಜ್ ಜೈನ್, ಐಡಿಯಲ್ ಐಸ್ ಕ್ರೀಮ್ ಆಡಳಿತ ನಿರ್ದೇಶಕ ಮುಕುಂದ ಕಾಮತ್, ಸ್ವಸ್ತಿಕ್ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಅಧ್ಯಕ್ಷ ರಾಘವೇಂದ್ರ ಹೊಳ್ಳ,ಮೈಸೂರು ಎಲೆಕ್ಟ್ರಿಕಲ್ ಕಂಪೆನಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಜ್ಯೋತಿಷಿ ಅಶ್ವಿನ್ ಶರ್ಮಾ,ಓಶಿಯನ್ ಪರ್ಲ್ ಸಂಸ್ಥೆಯ ಉಪಾಧ್ಯಕ್ಷ ಗಿರೀಶ್, ನಗರ ಉಪ ಪೊಲೀಸ್ ಆಯುಕ್ತ ರವಿಶಂಕರ್,ಕಲಾಸಾಧನ ಸಂಸ್ಥೆಯ ನಿರ್ದೇಶಕಿವಿಭಾ ಶ್ರೀನಿವಾಸ ನಾಯಕ್ ,ಅಶ್ವಿನ್ ಶರ್ಮಾಮೊದಲಾದವರು ಉಪಸ್ಥಿತ ರಿದ್ದರು. ಶ್ರೀನಿವಾಸ ನಾಯಕ್ ಸ್ವಾಗತಿ ಸಿದರು, ಭಾಸ್ಕರ್ ರೈ ಕಟ್ಟ ವಂದಿಸಿದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕೊಲ್ಕತ್ತಾದ ಅರಣ್ಯ ಚೌಧರಿಯವರಿಂದ ಸಂತೂರ್ ವಾದನ ಮತ್ತು ಕೊಲ್ಕತ್ತಾದ ಪಿಂಟೂದಾಸ್ ರವರ ತಬಲಾಸಾಥ್ ನೊಂದಿಗೆ ಹಿಂದೂಸ್ತಾನಿ ಕಚೇರಿ ನಡೆಯಿತು.ಧಾರಾವಾಡ ಜಿಲ್ಲೆಯ ಮಾನ್ವಿ ತಾಲೂಕಿನ ಬಸವರಾ ವಂದಲಿ ಮತ್ತು ಸಂಗಡಿಗರು ಹಿಂದೂಸ್ತಾನಿ ಸಂಗೀತ ಕಚೇರಿ ನಡೆಸಿಕೊಟ್ಟರು. ಹೇಮಂತ್ ಭಾಗ್ ವತ್ ಹಾರ್ಮೋನಿಯಂ ಮತ್ತು ವಿಘ್ನೇಶ್ ಪ್ರಭು ತಬಲಾ ಸಾಥ್ ನೀಡಿದರು.ಮೇದಾ ಜಿ.ಭಟ್ , ಹಾರ್ಮೋನಿಯಂ,ಅನ್ವೇಷಾ ನಾಯಕ್ ಮತ್ತು ಶ್ರುತಿ ಪ್ರಭು ತಾನ್ಪೂರ ವಾದನದಲ್ಲಿ ಸಹಕರಿಸಿದರು.ಸುಕನ್ಯಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು
