ಮಂಗಳೂರು: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಡ್ಯಾರ್ ಇಲ್ಲಿನ
ಗ್ರಾಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಾಚ್೯ 1 ರಿಂದ 9 ರ ತನಕ ನಡೆಯಲಿರುವ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪ್ರಥಮ ಧಾರ್ಮಿಕ ವಿಧಿ ಚಪ್ಪರ ಮುಹೂರ್ತ ಕ್ಷೇತ್ರದ ತಂತ್ರಿವರೇಣ್ಯರಾದ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ನೆರವೇರಿತು. ಕ್ಷೇತ್ರದ ಆಡಳಿತ ಸಮಿತಿ, ಪುನಃ ನಿರ್ಮಾಣ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
