ಮಂಗಳೂರು: ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮಂಗಳೂರಿನ ಚಿಂತನ್ ಎಸ್. ಶೆಟ್ಟಿ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಅಭಿನಂದಿಸಿದರು.
ಫ್ರೀ ಸ್ಟೈಲ್ ರಿಲೇ ಈಜುಕೂಟದಲ್ಲಿ ಚಿಂತನ್ ಶೆಟ್ಟಿ ಅವರು ಇತರ ಮೂವರು ಕ್ರೀಡಾಪಟುಗಳೊಂದಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. 3:26:26 ನಿಮಿಷದಲ್ಲಿ ಗುರಿ ತಲುಪಿದ ಅವರ ಸಾಧನೆಯು ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು.
ಮಂಗಳಾ ಈಜು ತಂಡದ ಸದಸ್ಯರಾಗಿರುವ ಅವರು ಶಿವಾನಂದ ಗಟ್ಟಿ ಅವರಲ್ಲಿ ತರಭೇತಿ ಪಡೆಯುತ್ತಿದ್ದಾರೆ.
