ಕಾವೂರು ಮಂಜಲಕಟ್ಟೆ ಶ್ರೀ ಕೋದ೯ಬ್ಬು ದೈವಸ್ಥಾನ ಕಾವೂರು ಇದರ ಕಂಬೆರ್ಲಕಲ ಜೀರ್ಣೋದ್ಧಾರಗೊಂಡು ಪುನಃ ಪ್ರತಿಷ್ಠೆ, ಧಾರ್ಮಿಕ ಸಭಾ ಕಾರ್ಯಕ್ರಮ ಗಿರಿಜಾತೆ ಆರ್.ಭಂಡಾರಿ ದೆಪ್ಪುಣಿಗುತ್ತು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದೈವಸ್ಥಾನದ ವಠಾರದಲ್ಲಿ ಜರಗಿತು.
ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಹಿರಿಯರು – ಕಿರಿಯರ ಸಂಪೂರ್ಣ ಸಹಕಾರದಿಂದ ದೈವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನೆರವೇರಿದೆ. ಕಂಬೆರ್ಲಕಲ ಜೀರ್ಣೋದ್ಧಾರಗೊಂಡು ದೈವ ಸಾನಿಧ್ಯ ಇನ್ನಷ್ಟು ಹೆಚ್ಚಾಗಿದೆ. ದೈವಸ್ಥಾನಕ್ಕೆ ಬರುವ ಭಕ್ತ ಜನರಿಗೆ ಸಂಪೂರ್ಣ ಅನುಗ್ರಹ ದೊರೆಯುವಂತಾಗಲಿ. ದೈವ ದೇವರ ಆರಾಧನೆಯಿಂದ ನಾಡಿನಲ್ಲಿ ಸುಭಿಕ್ಷೆ ನೆಲೆಯಾಗಲಿ ಎಂದರು.
ಈ ಸಂದರ್ಭ ಮನಪಾ ಸದಸ್ಯೆ ಗಾಯತ್ರಿ ರಾವ್, ಉದ್ಯಮಿಗಳಾದ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಪ್ರತೀಕ್ ಯು. ಪೂಜಾರಿ, ನವೀನ್ ಪೂಜಾರಿ ಶಕ್ತಿನಗರ, ಪುಷ್ಪರಾಜ್ ಸ್ಯಾಮ್ಯುವೆಲ್, ದೈವಸ್ಥಾನ ಸಮಿತಿಯ ಪ್ರಮುಖರಾದ ಶಂಕರ ಶೆಟ್ಟಿ ನಂದನಕೆರೆ, ಶ್ರೀನಿವಾಸ್ ದುಗ್ಗಣಮನೆ, ಅಭಿಮನ್ಯು ಫ್ರೆ೦ಡ್ಸ್ ಸರ್ಕಲ್ ಮುಲ್ಲಕಾಡು ಅಧ್ಯಕ್ಷ ಶೇಖರ್ ಕುಲಾಲ್, ಭಾಸ್ಕರ್ ಗುರಿಕಾರ ಮೊದಲಾದವರು ಉಪಸ್ಥಿತರಿದ್ದರು.
ಉದ್ಯಮಿ ಪ್ರತೀಕ್ ಯು. ಪೂಜಾರಿ ಹಾಗೂ ಎಂಜಿನಿಯರ್ ಸಂದೀಪ್ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.ಡಾ. ಪ್ರೀತಿ ಕೀಕಾನ್ ಸ್ವಾಗತಿಸಿದರು. ಭರತ್‌ರಾಜ್ ಪ್ರಸ್ತಾವಿಕ ಮಾತನಾಡಿದರು. ಪ್ರವಿಷ್ಯಾ ಪ್ರಜ್ವಲ್ ವಂದಿಸಿದರು. ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಆ ಬಳಿಕ ಸಾಯಿ ಡ್ಯಾನ್ಸ್ ಇನ್ಸ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
Kavur Manjalakattee Sri Kordabbu Deity: Kamberkala Restoration
