25.3 C
Karnataka
Tuesday, March 4, 2025

ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆ

ಮ೦ಗಳೂರು: ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ಯೋಜನೆ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಈ ಯೋಜನೆ ಗುತ್ತಿಗೆದಾರ ಕಂಪನಿಯೆನಿಸಿಕೊಂಡಿರುವ UKTL-ಸ್ಟೆರ್ ಲೈಟ್ ಪವರ್ ಕಂಪನಿಯವರು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂಧನ ಸಚಿವಾಲಯದ ಸ್ಪಷ್ಟ ನೀತಿ-ನಿಯಮ, ಕಾನೂನಾತ್ಮಕ ಮಾರ್ಗಸೂಚಿಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆನೇ ಕಾನೂನು ಬಾಹಿರ ಕಾರ್ಯ ನಡೆಸುತ್ತಾ ಬರುತ್ತಿದ್ದಾರೆ. ಪ್ರಕೃತಿ ವಿರೋಧಿಯಾಗಲಿರುವ ಇಂತಹ ವಿನಾಶಕಾರೀ ಯೋಜನೆಯ ಪ್ರಸ್ತಾವಿತ ಮಾರ್ಗವನ್ನು ಬದಲಾವಣೆ ಮಾಡಿ ಅತೀ ಕಡಿಮೆ ಸಮಸ್ಯೆಯಾಗುವ ಪರ್ಯಾಯ ಮಾರ್ಗಗಳ ಮೂಲಕ ಯೋಜನೆ ಅನುಷ್ಠಾನಗೊಳಿಸುವರೇ ಒತ್ತಾಯಿಸಿ ಫೆ.20ರ೦ದು “ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆಯನ್ನು” ಮಂಗಳೂರು ಕೇಂದ್ರ ಭಾಗದಲ್ಲಿ ನಡೆಸಲು ನಿಧ೯ರಿಸಲಾಗಿದೆ ಎ೦ದು ವಿವಿಧ ಸ೦ಘಟನೆಗಳ ಮುಖ೦ಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಥೊಲಿಕ್ ಸಭಾ ಮಂಗಳೂರು ಪ್ರದೇಶ ) ಇದರ ಮಂದಾಳತ್ವದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ (ರಿ ), ಉಡುಪಿ; ಕಾಸರಗೋಡು 400 KV ಮತ್ತು ಪಾಲಡ್ಕ-ಕಡಂದಲೆ 400/220 KV ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ, ಉಡುಪಿ, ದ.ಕ.; ರೈತ ಸಂಘ -ಹಸಿರು ಸೇನೆ; ಭಾರತೀಯ ಕಿಸಾನ್ ಸಂಘ ( ಕರ್ನಾಟಕ ಪ್ರದೇಶ; ಪರಿಸರ ಸಂಗಮ-ಜೀವ ಸಂಕುಲ ಪರ ವೇದಿಕೆ; ಉಡುಪಿ ಜಿಲ್ಲಾ ಕೃಷಿಕರ ಸಂಘ ಹಾಗೂ ಸಮಾನ ಮನಸ್ಕ ರೈತ ಪರ ಸಂಘ -ಸಂಸ್ಥೆಗಳು, ದ.ಕ., ಉಡುಪಿ, ಐ ಸಿ ವೈ ಎಂ ಮಂಗಳೂರು ಧರ್ಮ ಪ್ರಾಂತ್ಯ ಮತ್ತು ಕಾಸರಗೋಡು ಜಿಲ್ಲೆ ಇದರ ಸಹಭಾಗಿತ್ವದಲ್ಲಿ ಫೆ.20ರ೦ದು ಬೆಳಗ್ಗೆ 9.30ಕ್ಕೆ ಬಲ್ಮಠದಿಂದ ಮಿನಿ ವಿಧಾನ ಸೌಧದವರೆಗೆ “ಹಕ್ಕೋತ್ತಾಯ ಜಾಥಾ” ನಡೆಸಲಾಗುವುದು. ನಂತರ 11ಗಂಟೆಗೆ “ಬೃಹತ್ ಪ್ರತಿಭಟನಾ ಸಭೆ”ಯನ್ನು ಮಿನಿ ವಿಧಾನ ಸೌಧದ ಎದುರು ನಡೆಸಿ ಸುಮಾರು 15 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಜನಾ ಸಂತ್ರಸ್ತರು, ಕೃಷಿಕರು ಹಾಗೂ ರೈತ ಪರ, ಪರಿಸರಪರ ಕಾಳಜಿ ಉಳ್ಳ ಸಮಾನ ಮನಸ್ಕ ಸಂಘ ಸಂಸ್ಥೆ ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಬಂಧುಗಳೆಲ್ಲರನ್ನು ಜೊತೆಯಾಗಿಸಿಕೊಂಡು ಸರಕಾರಗಳನ್ನು, ಜನಪ್ರತಿನಿಧಿಗಳನ್ನು, ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುವ ಕಾರ್ಯ ನಡೆಸಲಾಗುವುದು ಎ೦ದು ಸ೦ಘಟನೆಗಳ ಮುಖ೦ಡರು ವಿವರಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ಪ್ರಮುಖ ಹಕ್ಕೋತ್ತಾಯಗಳು:
ಈಗಾಗಲೇ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿರುವ ಕೃಷಿ ಭೂಮಿ ಮತ್ತು ಸಮೃದ್ಧ ಕೃಷಿ ಸಂಪತ್ತು, ಅರಣ್ಯ ಸಂಪತ್ತು ಸರ್ವ ನಾಶವಾಗುವುದನ್ನು ತಪ್ಪಿಸಿ ಯೋಜನೆ ಅನಿವಾರ್ಯವೇ ಆಗಿದ್ದಲ್ಲಿ “ಪರ್ಯಾಯ ಮಾರ್ಗದ” ಮೂಲಕ ಮಾತ್ರವೇ ಅನುಷ್ಠಾನಗೊಳಿಸುವುದು. ಬ್ರಿಟಿಷರ ಕಾಲದ ಟೆಲಿಗ್ರಾಫ್ ಕಾಯ್ದೆ-1885ನ್ನು ಸಂಪೂರ್ಣ ರದ್ದುಗೊಳಿಸಿ, 2003ರ ಎಲೆಕ್ಟ್ರಿಸಿಟಿ ಕಾಯ್ದೆಯನ್ನು ಮಾತ್ರ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗಳಿಗೆ ಅನ್ವಯಗೊಳಿಸುವುದು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಸ್ಪಷ್ಟ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುದು.ಉಡುಪಿ-ಕಾಸರಗೋಡು 400 KV ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಅನುಷ್ಠಾನಕ್ಕಾಗಿ ಗುತ್ತಿಗೆದಾರರಾದ UKTL -STERLITE ಕಂಪನಿಗೆ ನೀಡಲಾದ ಏಕ ಸ್ವಾಮ್ಯ ಪರಮಾಧಿಕಾರವನ್ನು ರದ್ದುಪಡಿಸಿ ಸರಕಾರವೇ ಜವಾಬ್ದಾರಿಯುತ ಪ್ರಮುಖ ಭಾಗಿದಾರರಾಗುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ನಮ್ಮು ಪ್ರಮುಖ ಹಕ್ಕೋತ್ತಾಯಗಳಾಗಿವೆ ಎ೦ದರು.

ಪತ್ರಿಕಾ ಗೋಷ್ಠಿಯಲ್ಲಿ ಆಲ್ವಿನ್ ಡಿಸೋಜಾ, ಪಾನೀರ್ – ಅಧ್ಯಕ್ಷರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ , ಪಾವ್ಲ್ ರೋಲ್ಫಿ ಡಿ ಕೋಸ್ತಾ – ಮಾಜಿ ಕೇಂದ್ರಿಯ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ , ರೊಯ್ ಕ್ಯಾಸ್ತಲಿನೊ – ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ, ಸ್ಟ್ಯಾನಿ ಲೋಬೊ – ನಿಕಟ ಪೂರ್ವ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗಳೂರು ಪ್ರ ಪ್ರದೇಶ ,ಸಂತೋಷ್ ಕರ್ನೆಲಿಯೊ – ಕಥೊಲಿಕ್ ಸಭಾ ಉಡುಪಿ ಪ್ರದೇಶ , ಆಲ್ವಿನ್ ಪ್ರಶಾಂತ್ ಮೊಂತೇರೊ – ಪ್ರಧಾನ ಕಾರ್ಯದರ್ಶಿಗಳು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ,ವಿಕ್ಟರ್ ಕಡಂದಲೆ – ಹೋರಾಟ ಸಮಿತಿ ಸದಸ್ಯರು,ಚಂದ್ರಹಾಸ ಶೆಟ್ಟಿ ಕೃಷ್ಣ ಪ್ರಸಾದ್ ತಂತ್ರಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles