23.1 C
Karnataka
Tuesday, March 4, 2025

ಮಾ.8: ಪುರಭವನದಲ್ಲಿ “ಶೌರ್ಯ”

ಮಂಗಳೂರು: ಲಯನ್ಸ್‌ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್ಟ್ 317 ಡಿ, ಐಡಿಎಫ್ಸಿ ಫ‌ಸ್ಟ್‌ ಬ್ಯಾಂಕ್‌ ಮತ್ತು ಬಿಎಎನ್‌ಎಂಎಸ್‌ ಮಂಗಳೂರು ತಾಲೂಕು ಸಮಿತಿ ಮಹಿಳಾ ಘಟಕದ ಸಹಯೋಗದಲ್ಲಿ ತಪಸ್ಯದಿಂದ ಶೌರ್ಯ ಹೆಸರಲ್ಲಿ ಸಾಹಸಿಗಳನ್ನು ಗೌರವಿಸುವ ಕಾರ್ಯಕ್ರಮವು ಮಾ. 8ರಂದು ಶನಿವಾರ ಬೆಳಗ್ಗೆ 10.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಬಾಲ್ಯದ ಕ್ಯಾನ್ಸರ್‌ ವಾರಿಯರ್‌ , ಸಾಹಸಿ ಮಹಿಳೆಯರು ಹಾಗೂ ನಿರ್ದಿಷ್ಟ ಧ್ಯೇಯದೊಂದಿಗೆ ಓಡುವ ಓಟಗಾರರನ್ನು ಗೌರವಿಸಲಾಗುವುದು.
ಕಾರ್ಯಕ್ರಮವನ್ನು 317 ಡಿ ಡಿಸ್ಟ್ರಿಕ್ಟ್ ಗವರ್ನರ್‌ ಲ| ಭಾರತಿ ಬಿ.ಎಂ. ಉದ್ಘಾಟಿಸಲಿದ್ದು, ಸಿನೆಮಾ ನಿರ್ದೇಶಕಿ ರೂಪಾ ಅಯ್ಯರ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಐಡಿಎಫ್ಸಿ ಬ್ಯಾಂಕ್‌ ಸಿಎಂಒ ನಾರಾಯಣನ್‌ ಟಿ.ವಿ. ಅವರು ಮುಖ್ಯ ಅತಿಥಿಗಳಾಗಿರುವರು. ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಶಾಸಕ ವೇದವ್ಯಾಸ ಕಾಮತ್‌, ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌, ಜಿಲ್ಲಾಧಿಕಾರಿ ಮುಲ್ಲಯಿ ಮುಗಿಲನ್‌, ಮಂಗಳೂರಿನ ಆಂಕಾಲಜಿಸ್ಟ್‌ ಡಾ| ಹರ್ಷ ಪ್ರಸಾದ್‌ ಎಲ್‌., ಆಸರೆ ಚಾರಿಟೆಬಲ್‌ ಟ್ರಸ್ಟ್‌ನ ಚೇರ್‌ಪರ್ಸನ್‌ ಡಾ| ಆಶಾಜ್ಯೋತಿ ರೈ ಅವರು ಗೌರವ ಅತಿಥಿಗಳಾಗಿರುವರು.
ಸಮಾರಂಭದಲ್ಲಿ ಕ‌ುಮಾರ್‌ ಅಜ್ವನಿ, ರೇಶ್ಮಾ ಗಿರೀಶ್‌ ಶೆಟ್ಟಿ, ಹರಿದಾಸನ್‌ ನಾಯರ್‌ ಮತ್ತು ಗಿರೀಶ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.


Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles