21 C
Karnataka
Thursday, March 6, 2025

ರಾಜ್ಯ ಬಜೆಟ್ : ಕರಾವಳಿಯ ಒಂದಷ್ಟು ನಿರೀಕ್ಷೆಗಳು

ಮ೦ಗಳೂರು: ರಾಜ್ಯ ಸರಕಾರದ ಬಜೆಟ್ ಮಂಡನೆ ಸನ್ನಿಹಿತವಾಗುತ್ತಿದ್ದು ಪ್ರತಿ ಬಾರಿ ಬಜೆಟ್ ಮಂಡನೆ ಸಮೀಪಿಸುತ್ತಿರುವಾಗ ಕರಾವಳಿಗೆ ಸಂಬಂಧಪಟ್ಟಂತೆ ಒಂದಷ್ಟು ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಹೊಸ ಯೋಜನೆಗಳು, ಕೊಡುಗೆಗಳ ಆಶಾವಾದ ಮೂಡುತ್ತವೆ.
ಕರಾವಳಿಗೆ ಸಂಬಂಧಪಟ್ಟಂತೆ ಈ ಹಿಂದಿನ ಬಜೆಟ್‌ಗಳಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಟಾನ,ಅನುದಾನ ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಬಹುಕಾಲದ ಬೇಡಿಕೆ ಮತ್ತು ಅವಶ್ಯಕತೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಪೂರಕ ಸ್ಪಂದನೆ ದೊರೆಯಬಹುದು ಎಂಬುದು ಜಿಲ್ಲೆಯ ಜನತೆಯ ಆಶಾವಾದವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೃಹತ್ ಬಂದರು, ರೈಲು ಸಂಪರ್ಕ, ವಾಯು ಸಂಪರ್ಕ, ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಉದ್ದಿಮೆಗಳು ಹಾಗೂ ಹೂಡಿಕೆಗೆ ಅವಶ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಇಲ್ಲಿ ಅರ್ಥಿಕ ಅಭಿವೃದ್ದಿಗೆ ಹೆಚ್ಚು ಅವಕಾಶಗಳಿವೆ. ಉದ್ಯೋಗ ಸೃಷ್ಠಿಗೆ ಯೋಜನೆಗಳು ಅನುಷ್ಟಾನಗೊಳ್ಳಬೇಕಾಗಿದೆ. ಐಟಿ, ಆಹಾರ ಸಂಸ್ಕರಣೆ ಹಾಗೂ ವಸ್ತ್ರೋದ್ಯಮ ,ಪ್ರವಾಸೋದ್ಯಮಗಳಿಗೆ ಜಿಲ್ಲೆಯ ಪರಿಸರ ಮತ್ತು ಭೌಗೋಳಿಕ ಸನ್ನಿವೇಶ ಹೆಚ್ಚು ಪೂರಕವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.ಇದೇ ನೆಲೆಯಲ್ಲಿ ಜಿಲ್ಲೆಗೆ ಜವುಳಿ ( ಆ್ಯಪೆರಾಲ್) ಪಾರ್ಕ್, ಆಹಾರ ಸಂಸ್ಕರಣಾ ಉದ್ಯಮ ಪಾರ್ಕ್ ,ಐಟಿ ಪಾರ್ಕ್, ಜಾಷಧ ತಯಾರಿ ಪಾರ್ಕ್, ಆಟೋಮೊಬೈಲ್ ಪಾರ್ಕ್ , ಸೋಲಾರ್ ಪಾರ್ಕ್‌ಗಳ ಸ್ಥಾಪನೆ, ಮುಂತಾದ ಯೊಜನೆಗಳನ್ನು ಪ್ರಸ್ತಾವನೆ ಮಾಡಲಾಗಿತ್ತು. ಆದರೆ ಈ ಎಲ್ಲಾ ಯೋಜನೆಗಳು ಪ್ರಸ್ತಾವನೆಯಲ್ಲೇ ಉಳಿದುಕೊಂಡಿದ್ದು ಈ ಬಾರಿಯ ಬಜೆಟ್‌ನಲ್ಲಾದರೂ ಇವುಗಳಲ್ಲಿ ಒಂದೆರಡು ಯೋಜನೆಗಳಾದರೂ ಒಳಗೊಳ್ಳಲಿ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ.

  1. ಕರಾವಳಿಯಲ್ಲಿ ಸಾಗರ ಪ್ರವಾಸೋದ್ಯಮ , ಹಿನ್ನೀರು ಪ್ರವಾಸೋದ್ಯಮ , ಧಾರ್ಮಿಕ ಪ್ರವಾಸೋದ್ಯಮ, ಹೆಲ್ತ್‌ ಟೂರಿಸಂ ಸೇರಿದ೦ತೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ನಿರ್ಲಕ್ಷ್ಯಕ್ಕೊಳಗಾಗಿರುವ ಕರಾವಳಿಗೆ ಈ ಬಾರಿಯ ಬಜೆಟ್‌ನಲ್ಲೂ ಹೆಚ್ಚಿನ ನಿರೀಕ್ಷೆ ಮಾಡಲಾಗಿದೆ. ಇಲ್ಲಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಈ ಭಾಗಕ್ಕೆ ಸಮಗ್ರವಾದ ವಿಶೇಷ ಯೋಜನೆ ಮತ್ತು ಪ್ಯಾಕೇಜ್‌ಗಳು ಅವಶ್ಯವಿದೆ. ಕುದ್ರುಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದು ಮತ್ತು ಬೀಚ್‌ಗಳ ಅಭಿವೃದ್ದಿ, ಟೂರಿಸ್ಟ್‌ ಸರ್ಕ್ಯೂಟ್ ರೂಪಿಸಲು ಕಾಯ೯ಯೋಜನೆ ಬೇಕಾಗಿದೆ.
  2. ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಗಳು, ಕುಡಿಯುವ ನೀರು ಪೂರೈಕೆ ಸೌಲಭ್ಯಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷೆ ಮಾಡಲಾಗುತ್ತಿದೆ. ಕಿರು ಹಾಗೂ ಮಧ್ಯಮ ನೀರಾವರಿ ಯೋಜನೆಗಳನ್ನು ಸಾಧ್ಯವಿರುವ ಕಡೆಗಳಲ್ಲಿ ಮಂಜೂರು ಆಗಬೇಕಾಗಿದೆ.
  3. ಮೀನುಗಾರಿಕಾ ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಯೋಜನೆ, ಮೂಲ ಸೌಕರ್ಯಗಳು, ಮಾರುಕಟ್ಟೆ ಉತ್ತೇಜನಗಳು.
    *ಮಂಗಳೂರು ನಗರ ಹೊರವಲಯಗಳಿಗೆ ವಿಸ್ತರಣೆಯಾಗುತ್ತಿದೆ. ಉಪನಗರಗಳು ಅಭಿವೃದ್ಧಿಯಾಗುತ್ತಿವೆ. ಸಂಚಾರದಟ್ಟನೆ ನಿವಾರಣೆಗೆ 2018 ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್‌ನಲ್ಲಿ ಘೋಷಿಸಿದ್ದ ಬೆಂಗಳೂರು ಮಾದರಿಯಲ್ಲಿ ಮೆಟ್ರೋ ವ್ಯವಸ್ಥೆ ಅನುಷ್ಟಾನಕ್ಕೆ ಪೂರಕ ಕ್ರಮಗಳು ಹಾಗೂ ಅನುದಾನ ಮೀಸಲು.2018 ರ ಬಜೆಟ್‌ನಲ್ಲಿ ಘೋಷಿಸಿದ್ದ ಕೋಣಾಜೆ -ಮಣಿಪಾಲ ನಾಲೆಡ್ಜ್‌-ಹೆಲ್ತ್‌ ಕಾರಿಡಾರ್ ಯೋಜನೆ ಅನುಷ್ಟಾನಕ್ಕೆ ಪೂರಕ ಕ್ರಮಗಳು,ಅಡಿಕೆ,ಭತ್ತ ಕೃಷಿಗೆ ಉತ್ತೇಜನ,ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಗಳ ಬಲವರ್ಧನೆ ಅಗತ್ಯವಿದೆ.
    **ಕುಮ್ಕಿ, ಕಾನೆ , ಬಾಣೆ, ಡೀಮ್ಡ್‌ ಅರಣ್ಯ ಸಾಗುವಳಿದಾರರ ಹಾಗೂ ಮೂಲಗೇಣಿ ಸಮಸ್ಯೆಗಳು ಹಲವಾರು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕ್ರಮ
  4. ತಾಲೂಕು ಸರಕಾರಿ ಆಸ್ಪತ್ರೆಗಳನ್ನು ಸೂಪರ್‌ಸ್ಪೆಷಾಲಿಟಿ ಆಗಿ ಉನ್ನತೀಕರಣ
  5. ಜಿಲ್ಲಾ ಕೇಂದ್ರ ಮಂಗಳೂರು ಇನ್ನೂ ಕೂಡಾ ಸುಸಜ್ಜಿತ ಮಾದರಿಯ ಕೇಂದ್ರ ಬಸ್‌ನಿಲ್ದಾಣ ಹೊಂದಿಲ್ಲ. ಪಿಪಿಪಿ ಮಾದರಿಯಲ್ಲಿ ಬಸ್‌ನಿಲ್ದಾಣ ಮಾಡುವ ಯೋಜನೆಗೆ ಖಾಸಗಿ ವಲಯದಿಂದ ಪೂರಕ ಸ್ಪಂದನೆ ಲಭ್ಯವಾಗದ ಹಿನ್ನಲೆಯಲ್ಲಿ ಸರಕಾರದ ವತಿಯಿಂದಲೇ ಬಸ್‌ನಿಲ್ದಾಣ ನಿರ್ಮಿಸಲು ಅನುದಾನ ಬಿಡುಗಡೆ.
    *ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೇತ್ರಾವತಿ ಮತ್ತು ಗುರುಪುರ ಸೇರಿದ೦ತೆ ಕರಾವಳಿ ಆಯ್ದ ನದಿಗಳಲ್ಲಿ ಬೋಟ್‌ಹೌಸ್‌ಗಳು, ಪ್ರತಿ ತಾಲೂಕಿನಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸೂಪರ್‌ಸ್ಪೆಷಾಲಿಟಿ ಆಗಿ ಉನ್ನತೀಕರಣ, ಐಟಿ ಪಾರ್ಕ್, ಕೈಗಾರಿಕೆ ಕ್ಲಸ್ಟರ್‌ ಗಳ ಸ್ಥಾಪನೆ .

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles