34.2 C
Karnataka
Saturday, April 19, 2025

ಪಿ.ಎ ಕಾಲೇಜ್:‌ ರಕ್ತದಾನ ಶಿಬಿರ

ಮ೦ಗಳೂರು: ಯೂತ್ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಸರಕಾರಿ ಲೇಡಿಗೋಶನ್ ಹಾಸ್ಪಿಟಲ್, ಮಂಗಳೂರು ಇದರ ಸಹಭಾಗಿತ್ವದಲ್ಲಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನೆರವೇರಿತು‌.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದ.ಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವೈದ್ಯಕೀಯ ಅಧಿಕಾರಿ ಡಾ. ಸುಖೇಶ್ ಮಾತನಾಡಿ “ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಆದರೂ ಅದು ಇನ್ನೊಂದು ಜೀವ ಉಳಿಸುವುದಲ್ಲದೆ ರಕ್ತದಾನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುವುದು” ಎಂದರು. ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲೆಯ ನಿರೂಪಕ ಪ್ರವೀಣ್ ಕುಮಾರ್, ಇಕೋಲಾಬ್ ಕೆ.ಎಸ್‌.ಎ. ಮಾಜಿ ಸೇಲ್ಸ್ ಎಂಡ್ ಮಾರ್ಕೆಟಿಂಗ್ ಮ್ಯಾನೇಜರ್ ಅಬ್ಬಾಸ್ ಉಚ್ಚಿಲ್, ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲ ಡಾ.ರಮೀಝ್ ಎಂ ಕೆ, ಪಿ.ಎ ಇನ್ಸ್ಟಿಟ್ಯೂಟ್ ಆಫ್ ಪಿಸಿಯೋಥೆರಪಿಯ ಪ್ರಾಂಶುಪಾಲ ಅಫೀಫ, ಪಿ.ಎ ಪಾಲಿಟೆಕ್ನಿಕ್ ಉಪಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಖಾನ್, ಪಿ.ಎ.ಇ.ಟಿಯ ಖರೀದಿ ವ್ಯವಸ್ಥಾಪಕ ಹಾರೀಸ್ ಟಿ.ಡಿ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಯೂತ್ ರೆಡ್ ಕ್ರಾಸಿನ ನಿರ್ವಾಹಕರಾದ ಸಾರ ಮಸ್ಕುರುನ್ನೀಸ ಮತ್ತು ಡಾ. ಶಿಜಿನ್ ಎನ್, ಎನ್.ಎಸ್‌.ಎಸ್‌ ನಿರ್ವಾಹಕರಾದ ಚೈತ್ರಾ ಎನ್‌‌.ವಿ‌. ಮತ್ತು ಇತಾಶ್ರೀ, ಹಾಗೂ ಐ.ಕ್ಯೂ.ಎ.ಸಿ ಯ ನಿರೂಪಕರಾದ ವಾಣಿಶ್ರೀ ವೈ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಾದ ಶಫ್ನಾ ಶಿರೀನ್ ಸ್ವಾಗತಿಸಿ ಫೌಝ ಫಾತಿಮ ವಂದಿಸಿದರು‌. ಹಿಬಾ ಮರಿಯಂ ನಿರೂಪಿಸಿದರು. ೧೫೦ ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles