26 C
Karnataka
Saturday, April 19, 2025

ಉಪ್ಪಳ–ಹೊಸಂಗಡಿಯಲ್ಲಿ ಡ್ರಗ್ ವಿರೋಧಿ ಜನಜಾಗೃತಿ

ಮ೦ಗಳೂರು: ಸಮಾಜದೊಳಗೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಮಾದಕವಸ್ತು ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಹಾಗೂ ಮಂಜೇಶ್ವರದ ಜನಮೈತ್ರಿ ಪೊಲೀಸ್ ಠಾಣೆ ಹಾಗೂ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಪ್ಪಳ ಹಾಗೂ ಹೊಸಂಗಡಿ ಬಸ್ ನಿಲ್ದಾಣಗಳಲ್ಲಿ ಭಾವಪೂರ್ಣ ಬೀದಿ ನಾಟಕ ಹಾಗೂ ಮೈಮ್ ಕಾರ್ಯಕ್ರಮಗಳು ಏರ್ಪಡಿಸಲ್ಪಟ್ಟವು.

ಕಾಸರಗೋಡು ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ (ಎಎಸ್ಪಿ) ಪಿ. ಬಾಲಕೃಷ್ಣ ನಾಯರ್, ಹೊಸದುರ್ಗ್ ಠಾಣೆಯ ವೃತ್ತ ನಿರೀಕ್ಷಕ (ಸಿ.ಐ) ಅಜಿತ್ ಕುಮಾರ್, ಮಂಜೇಶ್ವರ ಠಾಣೆಯ ಸಿ.ಐ ಅನುಪ್ ಹಾಗೂ ಸ್ನೇಹಾಲಯ ಡಿ ಅಡಿಕ್ಶನ್ ಕೇಂದ್ರದ ಕಾರ್ಯನಿರ್ವಾಹಕ, ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರು ಉಪಸ್ಥಿತರಿದ್ದರು.

ಪೊಲೀಸ್ ಅಧಿಕಾರಿಗಳು, ಕಾಸರಗೋಡು ಜಿಲ್ಲೆಯಲ್ಲಿನ ಮಾದಕವಸ್ತು ಬಳಕೆಯಲ್ಲಿರುವ ಯುವಜನತೆಗೆ ಸೂಕ್ತ ಚಿಕಿತ್ಸೆ ನೀಡಲು ಇರುವ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಸ್ನೇಹಾಲಯವು ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಅಮೋಘ ಸೇವೆಗಳಿಗೆ ಪ್ರಶಂಸಿದರು. ಜೊತೆಗೆ, ಇತ್ತೀಚೆಗೆ ಈ ಸಂಸ್ಥೆಯು ಸ್ಥಾಪಿಸಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಯುಕ್ತಗೊಂಡಿರುವ ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಕುರಿತು ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಜೋಸೆಫ್ ಕ್ರಾಸ್ತಾ, ಸ್ನೇಹಾಲಯದಲ್ಲಿ ಲಭ್ಯವಿರುವ ವಿವಿಧ ಚಿಕಿತ್ಸೆ ವಿಧಾನಗಳು, ವೈಯಕ್ತಿಕ ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಕುಟುಂಬ ಜವಾಬ್ದಾರಿಗಳ ಜತೆಗೆ ಒಡನಾಡಿ ಬೆಳೆಸುವ ದಿಶೆಯ ಸೇವೆಗಳ ಬಗ್ಗೆ ವಿವರಿಸಿದರು.

ಸಮಾರಂಭದ ಅಂತ್ಯದಲ್ಲಿ ಸಾರ್ವಜನಿಕರು, ಉದ್ಯೋಗಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸ್ನೇಹಾಲಯ ತಂಡದ ಈ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮವನ್ನು ಶ್ರದ್ದೆಯಿಂದ ವೀಕ್ಷಿಸಿ ಎಲ್ಲಾ ಕಲಾವಿದರನ್ನು ಅಭಿನಂದಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles