ಮ೦ಗಳೂರು: ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು- ಕಣ್ಣೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ಸಾಂಪ್ರದಾಯಿಕ ಬೋಗಿಗಳನ್ನು ಅತ್ಯಾಧುನಿಕ ಎಲ್‌ಎಚ್‌ಬಿ (ಲಿಂಕ್ಹಾಫ್‌ಮನ್ ಬುಶ್) ಬೋಗಿಗಳೊಂದಿಗೆ ಬದಲಾಯಿಸಲು ನೈಋತ್ಯ ರೈಲ್ವೆ ಸಜ್ಜಾಗಿದೆ.
ಪರಿಷ್ಕೃತ ಎಲ್‌ಎಚ್‌ಬಿ ಬೋಗಿಗಳೊಂದಿಗೆಕಾರ್ಯನಿರ್ವಹಿಸಲಿರುವ ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಮೇ 5 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚಾರ ಆರಂಭಿಸಲಿದೆ. ಇದರ ಹಿಮ್ಮಾರ್ಗವಾದ ರೈಲು ಸಂಖ್ಯೆ 16586 ಮುರುಡೇಶ್ವರ- ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮೇ 6, 2025 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಇದಲ್ಲದೆ,
ಬೆಂಗಳೂರಿನಿಂದ ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ರೈಲು ಸಂಖ್ಯೆ 16511 (ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್) ಮೇ 7 ರಿಂದ ಹಾಗೂ ಹಿಮ್ಮಾರ್ಗದಲ್ಲಿ ಸಂಚರಿಸುವ ರೈಲು ಸಂಖ್ಯೆ 16512 (ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್) ಮೇ 8ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯನಿರ್ವಹಿಸಲಿವೆ.
ನವೀಕರಿಸಲಾದ ಎಲ್‌ಎಚ್‌ಬಿ ರೇಕ್ ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದ್ದು, ಇದರಲ್ಲಿ ಫಸ್ಟ್ ಕ್ಲಾಸ್ ಎಸಿ (1), ಎಸಿ2-ಟೈರ್ (2), ಎಸಿ 3-ಟೈರ್ (4), ಸ್ಲೀಪರ್ ಕ್ಲಾಸ್ (7), ಜನರಲ್ ಸೆಕೆಂಡ್ ಕ್ಲಾಸ್ (4), ಲಗೇಜ್/ಜನರೇಟರ್ ಕಾರ್‌ಗಳು (2).
ಇರಲಿವೆ. ಈ ಹಿಂದೆ 22 ಬೋಗಿಗಳನ್ನು ಹೊಂದಿದ್ದ ಐಸಿಎಫ್ ರೇಕ್‌ನ ಬದಲಿಗೆ ಈಗ 20 ಹೊಸ ಎಲ್‌ಎಚ್‌ಬಿ ಬೋಗಿಗಳನ್ನುಅಳವಡಿಸಲಾಗಿದೆ.
