25.5 C
Karnataka
Saturday, April 19, 2025

ಅರಂತಬೆಟ್ಟು ಗುತ್ತು: ಗಡಿಪ್ರಧಾನ ಕಾರ್ಯಕ್ರಮ, ಆಮಂತ್ರಣ ಪತ್ರಿಕೆ ಬಿಡುಗಡೆ

ಮ೦ಗಳೂರು: ಅರಂತಬೆಟ್ಟು ಗುತ್ತು ಶ್ರೀ ನಾಗದೇವರು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ಗಡಿ ಸ್ವೀಕಾರ ಸಮಾರಂಭ ಮೇ 4 ರಂದು ಭಾನುವಾರ ಬೆಳಿಗ್ಗೆ 8.20 ಕ್ಕೆ ಅರಂತಬೆಟ್ಟುಗುತ್ತುವಿನಲ್ಲಿ ನಡೆಯಲಿದೆ.

ಸುರತ್ಕಲ್ ಮಧುಸೂದನ‌ ಮಯ್ಯರವರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುರತ್ಕಲ್ ಕೊಡಿಪಾಡಿ ಬಾಳಿಕೆ ಹಾಗೂ ಪಡ್ರೆ ಚಾವಡಿಯ ಗಡಿ ಪ್ರಧಾನರುಗಳ ಉಪಸ್ಥಿತಿಯಲ್ಲಿ ಹಾಗೂ ಗೌರವಾನ್ವಿತ ಎಲ್ಲಾ ಗಡಿ ಪ್ರಧಾನರ ಸಮ್ಮುಖದಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ನಿಡ್ಡೋಡಿ ಮೈಂದಡಿ ಸದಾನಂದ ಶೆಟ್ಟಿಯವರಿಗೆ ಕಾಂತೇರಿ ಜುಮಾದಿಯ ಗಡಿ ಸ್ವೀಕಾರ ನಡೆಯಲಿದೆ.
ಕಾರ್ಯಕ್ರಮಗಳು
ಬೆಳಿಗ್ಗೆ 8.20 ಗಡಿ ಸ್ವೀಕಾರ, 10.30 ಕ್ಕೆ ಧರ್ಮರಸು ಉಳ್ಳಾಯ, ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಭಂಡಾರ ಇಳಿಸುವುದು, ನಂತರ ಧರ್ಮರಸು ಉಳ್ಳಾಯ ದೈವಕ್ಕೆ ನೇಮ, ಮಧ್ಯಾಹ್ನ‌1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 6 ಕ್ಕೆ ಮೈಸಂದಾಯ ದೈವಕ್ಕೆ ನೇಮ, ರಾತ್ರಿ 8 ಕ್ಕೆ ಅನ್ನ ಸಂತರ್ಪಣೆ, ರಾತ್ರಿ 9 ಕ್ಕೆ ಕಾಂತೇರಿ ಜುಮಾದಿ ಹಾಗೂ ಭಂಟ, ಸರಳ ಜುಮಾದಿ ಹಾಗೂ ಭಂಟ ದೈವಗಳಿಗೆ ನೇಮ, ನಂತರ ಪಿಲಿಚಾಮುಂಡಿ ದೈವಕ್ಕೆ ನೇಮ‌ ನಡೆಯಲಿದೆ.
ಮೇ 5 ರಂದು ರಾತ್ರಿ 8 ಕ್ಕೆ ಕಲ್ಲುರ್ಟಿ ಪಂಜುರ್ಲಿ ಹಾಗೂ ಜಾಗದ ಪಂಜುರ್ಲಿ ದೈವಗಳಿಗೆ ಕೋಲ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ
ಗಡಿ ಸ್ವೀಕಾರ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಎ.18 ರಂದು ಅರಂತಬೆಟ್ಟು ಗುತ್ತುವಿನಲ್ಲಿ ನಡೆಯಿತು.
ಗಡಿ ಪ್ರಧಾನರಾದ ಬಾಬು ಬಂಡ್ರಿಯಾಲ್ ಪಡ್ರೆ, ಜಗನ್ನಾಥ ಅತ್ತಾರ್ ಕೊಡಿಪಾಡಿ, ಮಧು ಮಯ್ಯ, ರಮಾನಾಥ ರೈ, ಬಾಲಕೃಷ್ಣ ಶೆಟ್ಟಿ ಏಳಿಂಜೆ ಅಂಗಡಿಗುತ್ತು, ಪುಷ್ಪರಾಜ ಶೆಟ್ಟಿ ಕುಡುಂಬೂರು, ದಿನಕರ ಶೆಟ್ಟಿ ಪಡ್ರೆ, ದೇವೇಂದ್ರ ಪೂಜಾರಿ ಪಡ್ರೆ, ಸದಾನಂದ ಶೆಟ್ಟಿ, ನವೀನ್ ಶೆಟ್ಟಿ ಪಡ್ರೆ, ಅರಂತ ಬೆಟ್ಟು ಗುತ್ತು ಮನೆತನದ ಮುದ್ದಣ್ಣ ಶೆಟ್ಟಿ, ನವೀನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ, ದಿಲ್ ರಾಜ್ ಆಳ್ವ, ಪ್ರಶಾಂತ್ ಶೆಟ್ಟಿ, ಜ್ಯೋತಿ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles