ಮಂಗಳೂರು: ಎಂ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಚೇರಿಯಲ್ಲಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಏ. 24 ರ೦ದು ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಫಾ ಮುಲ್ಲರ್ಸ್ ಸಂಸ್ಥೆಯ ನಿಯೋಜಿತ ನಿರ್ದೇಶಕರಾದ ವಂದನೀಯ ಪೌಸ್ತಿನ್ ಲೋಬೊ ಅವರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಗೌರವ ಸಲ್ಲಿಸಿ ಹಲವಾರು ಸಂದರ್ಭಗಳಲ್ಲಿ ಪೋಪ್ಆವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ಅವರು ಮಾನವಕುಲದ ಸುಧಾರಣೆಗಾಗಿ ನಿಜವಾದ ಅರ್ಥದಲ್ಲಿ ಶ್ರಮಿಸಿದ ಜಾಗತಿಕ ವ್ಯಕ್ತಿತ್ವ (ವಿಶ್ವ ಮಾನವ) ಆಗಿದ್ದರು. ಅವರ ನಿಧನದಿಂದಾಗಿ ಜಗತ್ತು
ಅನಾಥವಾಗಿದೆ ಮತ್ತು ಅವರ ಪವಿತ್ರತೆಯು ನಮ್ಮ ಜೀವನದಲ್ಲಿ ಅವರ ಆದರ್ಶಗಳನ್ನು ಅನುಸರಿಸಲು ನಮ್ಮ ಬೆಳಕಿನ ದಾರಿದೀಪವಾಗಲಿ ಎಂದು ಅವರು ಹಾರೈಸಿದರು.
ಬ್ಯಾಂಕಿನ ನಿರ್ದೇಶಕಿ ಐರಿನ್ ರೆಬೆಲ್ಲೊ ಅವರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಸರ್ವೋಚ್ಛ ಮಠಾಧೀಶರಾಗಿ ವಹಿಸಿದ್ದ ಸ್ಥಾನಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾ ಸಾಗಿದ ಹಾದಿಯನ್ನು ಪ್ರಸ್ತುತಪಡಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ಬ್ಯಾಂಕಿನ ಎಲ್ಲಾ ನಿರ್ದೇಶಕರು, ಗ್ರಾಹಕರು ಮತು ಸಿಬ್ಬಂದಿಗಳ
ಪರವಾಗಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ವಂ. ಪೌಸ್ತಿನ್ ಲೋಬೊ ಮತ್ತು ಉಪಾಧ್ಯಕ್ಷ ,ಜೆರಾಲ್ಡ್ ಜೂಡ್ ಡಿಸಿಲ್ವಾ
ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.
ಬ್ಯಾಂಕಿನ ಎಲ್ಲಾ ನಿರ್ದೇಶಕರು, ಅಡಳಿತ ಕಚೇರಿ ಮತ್ತು
ಸಂಸ್ಥಾಪಕ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೆಜಸ್ ವಂದಿಸಿದರು. ಹಿರಿಯ ಪ್ರಬಂಧಕ ಡೇರಿಲ್ ಲಸ್ರಾದೊ ನಿರೂಪಿಸಿದರು.
