ಮಂಗಳೂರು: ಬೆಂಗಳೂರು ವಿದ್ಯಾನಗರದ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಠತಾ ತರಬೇತಿ ಕೇಂದ್ರಕ್ಕೆ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಪ್ರತಿಭಾನ್ವಿತರಾಗಿರುವ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಲುವಾಗಿ ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ, ಕ್ರೀಡಾಶಾಲೆ, ವಿದ್ಯಾನಗರ, ಬೆಂಗಳೂರು ಕೇಂದ್ರಗಳಲ್ಲಿ ಮೇ 5 ಮತ್ತು 6 ರಂದು ಆಯ್ಕೆ ಪ್ರಕ್ರಿಯೆಯನ್ನು ಸಂಘಟಿಸಲಾಗುತ್ತಿದೆ. ಆಸಕ್ತ ಅರ್ಹ ಕ್ರೀಡಾಪಟುಗಳು ಆಯ್ಕೆಯಲ್ಲಿ ಭಾಗವಹಿಸಬಹುದು.
ಭಾಗವಹಿಸಲು ಅರ್ಹತೆಗಳು (ಆಯ್ಕೆ ಸಮಯದಲ್ಲಿ)
ಜುಲೈ 1, 2025ಕ್ಕೆ 15 ವರ್ಷ ಮೇಲ್ಪಟ್ಟವರಾಗಿದ್ದು, 21 ವರ್ಷ ಒಳಪಟ್ಟವರಾಗಿರಬೇಕು. ಪ್ರಸಕ್ತ 2024-25ನೇ ಸಾಲಿನಲ್ಲಿ 10ನೇ ತರಗತಿಯನ್ನು ಅಭ್ಯಾಸಿಸುತ್ತಿದ್ದು, ಶೈಕ್ಷಣಿಕ ವರ್ಷ 2025-26ನೇ ಸಾಲಿನ ಪ್ರಥಮ ಪದವಿಪೂರ್ವ ಕೋರ್ಸ್ (ಪ್ರಥಮ ಪಿ.ಯು.ಸಿ) ಗೆ ಪ್ರವೇಶ ಪಡೆಯುವ ಅರ್ಹತೆ ಉಳ್ಳವರಾಗಿರಬೇಕು. ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ 2 ವರ್ಷ ವಯೋಮಿತಿಯನ್ನು ಸಡಿಲಗೊಳಿಸಲಾಗುತ್ತದೆ. ತಜ್ಞರ ಸಮಿತಿ ಶಿಫಾರಸ್ಸಿನ ಅನ್ವಯ ಗರಿಷ್ಠ ವಯೋಮಿತಿಯನ್ನು ಸಾಮಥ್ರ್ಯದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವವಿವರದ ಅರ್ಜಿಯನ್ನು ಆಯ್ಕೆ ಸಂದರ್ಭದಲ್ಲಿ ಸಲ್ಲಿಸಬೇಕು. ಕರ್ನಾಟಕದಲ್ಲಿ ಜನಿಸಿದ ಹಾಗೂ ವಾಸಿಸುತ್ತಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಆಧಾರ್ ಕಾರ್ಡ್ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಕನಿಷ್ಠ ಪಕ್ಷ ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ (ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ರಾಜ್ಯ ಶಾಲಾ ಕ್ರೀಡಾಕೂಟ, ವಿಶ್ವವಿದ್ಯಾನಿಲಯ ಸಂಘಟಿಸುವ ಕ್ರೀಡಾಕೂಟ) ಪದಕ ಪಡೆದಿರಬೇಕು.
ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟದಲ್ಲಿ (ಅಥ್ಲೆಟಿಕ್ಸ್ ಫೆಡರೇಶನ್, ಶಾಲಾ ರಾಷ್ಟ್ರೀಯ ಫೆಡರೇಷನ್ ಹಾಗೂ ಅಖಿಲ ಭಾರತ ವಿಶ್ವವಿದ್ಯಾನಿಲಯ ಸಂಘಟಿಸುವ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಪಡೆದವರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಕಳೆದ ಹಾಗೂ ಪ್ರಸ್ತುತ ಸಾಲಿನ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು. ಕರ್ನಾಟಕದಲ್ಲಿ ಜನಿಸಿದ ಹಾಗೂ ವಾಸಿಸುತ್ತಿರುವ ಬಾಲಕ-ಬಾಲಕಿಯರು ಹಾಗೂ ಕ್ರೀಡಾಕೂಟದಡಿಯಲ್ಲಿ ನೇಮಕಗೊಂಡಿರುವ ಕ್ರೀಡಾಪಟುಗಳು ಭಾಗವಹಿಸಬಹುದು.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಇಲಾಖೆಯ ಕ್ರೀಡಾಶಾಲೆ/ನಿಲಯ ಯೋಜನೆಯಲ್ಲಿ ಆಯ್ಕೆಗೊಂಡಿರುವ ಕ್ರೀಡಾಪಟುಗಳು ಭಾಗವಹಿಸಬಹುದು.ಈ ಆಯ್ಕೆ ಪ್ರಕ್ರಿಯೆ ದಿನದಂದು ಸಂಘಟಿಸಲಾಗುವ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಜನ್ಮ ದಿನಾಂಕದ ದಾಖಲಾತಿಗಾಗಿ ಜನನ ಪ್ರಮಾಣ ಪತ್ರ ಅಥವಾ ಶೈಕ್ಷಣಿಕ ಶಾಲಾ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ಹಾಗೂ 10ನೇ ತರಗತಿ ತೇರ್ಗಡೆಹೊಂದಿರುವ ಅಂಕಪಟ್ಟಿಯ ನಕಲು ಪ್ರತಿ ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಕ್ರೀಡೆಗಳಲ್ಲಿ ಸಾಧಿಸಲಾಗಿರುವ ಸಾಧನೆ ಹಾಗೂ ಸಾಮಥ್ರ್ಯದ ಪ್ರಮಾಣ ಪತ್ರದ ನಕಲು ಹಾಗೂ ಮೂಲ ಪ್ರತಿ ಸಲ್ಲಿಸಬೇಕು.
ಆರೋಗ್ಯ ದೃಢೀಕರಣ ಹಾಗೂ ದೈಹಿಕ ಸಾಮಥ್ರ್ಯದ ಪ್ರಮಾಣ ಪತ್ರವನ್ನು ಸರ್ಕಾರಿ ವೈದ್ಯರಿಂದ ದೃಢೀಕರಿಸಿದ ನಕಲು ಪ್ರತಿ ಹಾಗೂ ಮೂಲಪ್ರತಿ ಸಲ್ಲಿಸಬೇಕು. ಉದ್ದೀಪನ ಮದ್ದು ಸೇವೆನೆಯಿಂದಾಗಿ ಅಮಾನತ್ತಿನ ಶಿಕ್ಷೆಗೆ ಒಳಪಟ್ಟಿರುವ ಕ್ರೀಡಾಪಟುಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರಕ್ಕೆ ತಲುಪಲು ಮಾರ್ಕೆಟ್ ನಿಂದ 282, 282ಅ, 282ಇ, 298 ಃಒಖಿಅ ಬಸ್ಸುಗಳು ಕೆ.ಆರ್. ಮಾರ್ಕೆಟ್‍ನಿಂದ ಪ್ರಾರಂಭಗೊಂಡು ನೇರವಾಗಿ ವಿದ್ಯಾನಗರಕ್ಕೆ ತಲುಪುತ್ತದೆ ಹಾಗೂ ಮೆಜೆಸ್ಟಿಕ್‍ನಿಂದ ಬಸ್ ಸಂಖ್ಯೆ. 298ಒ ವಿದ್ಯಾನಗರ ಕ್ರಾಸ್ ಗೆ ತಲುಪುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
