ಮ೦ಗಳೂರು:ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಹಾಗೂ ಉಡುಪಿ ದ್ವಿತೀಯಪಡೆದುಕೊಂಡಿದೆ.ದಕ್ಷಿಣ ಕನ್ನಡ ಶೆ.91.12 ಮತ್ತು ಶೇ. 89.96% ಫಲಿತಾಂಶ ದಾಖಲಿಸಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗತ ವೈಭವ ಮರಳಿ ಬಂದಿದೆ. ಎಸ್. ಎಸ್. ಎಲ್. ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದೇವೆ. ಅತ್ಯುತ್ತಮವಾದ ಫಲಿತಾಂಶ ದೊರೆತಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಕಷ್ಟು ಶ್ರಮವಹಿಸಿ ಇದನ್ನು ಸಂಪಾದಿಸಿದ್ದಾರೆ. ಶಾಲೆಗಳ ಆಡಳಿತ ಮಂಡಳಿಗಳು, ಪೋಷಕರು ಮತ್ತು ಸರಕಾರೇತರ ಸಂಘ ಸಂಸ್ಥೆಗಳು ನಮ್ಮ ಈ ಸಾಧನೆಗೆ ಬೆಂಬಲಿಸಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಎಲ್ಲಾ ಸ್ಥರದ ಅಧಿಕಾರಿಗಳ ಬೆಂಬಲದಿಂದ ಇದು ಸಾಧ್ಯವಾಯಿತು ಎ೦ದು ಡಿಡಿಪಿಐ ಗೋವಿಂದ ಮಡಿವಾಳ ಹೇಳಿದ್ದಾರೆ.
ಸರಕಾರದ ಕಲಿಕಾ ಉತ್ತೇಜನ ಕಾರ್ಯಕ್ರಮಗಳು, ಶಾಲೆಗಳಲ್ಲಿ ವಿಶೇಷ ತರಗತಿ, ವ್ಯಕ್ತಿನಿಷ್ಟ ಪರಿಹಾರ ಬೋಧನೆ, ಶಿಕ್ಷಕರ ಪುನಃಚೇತನಾ ತರಬೇತಿಗಳು, ಪುನರಾವರ್ತನೆ, ಪೂರ್ವತಯಾರಿ ಅಣಕು ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ವೃದ್ಧಿಸಿದವು. ಶಾಲಾ ವೇಳೆಯ ಮೊದಲು ಮತ್ತು ನಂತರ ಹಮ್ಮಿಕೊಂಡ ವಿಶೇಷ ಕಾಳಜಿಯುಕ್ತ ಬೋಧನೆ ಮತ್ತು ಬೆಂಬಲ ವಿದ್ಯಾರ್ಥಿಗಳನ್ನು ಈ ಸಾಧನೆಗಾಗಿ ಆಂತರಿಕವಾಗಿ ಪ್ರೆರೇಪಿಸಿದವು.
ಇಲಾಖೆಯು ಪರೀಕ್ಷೆ ನಡೆಸಿದ ಕ್ರಮ ಮತ್ತು ವಿಧಾನ ಅತ್ಯುತ್ತಮವಾಗಿದ್ದು, ವಿದ್ಯಾರ್ಥಿ-ಸ್ನೇಹಿಯಾಗಿತ್ತು. ದೋಷರಹಿತವಾದ ಸಮತೂಕದ ಪ್ರಶ್ನೆಪತ್ರಿಕೆ, ವ್ಯವಸ್ಥಿತವಾದ ಮೌಲ್ಯಮಾಪನ ವಿಧಾನ ಎಲ್ಲರಲ್ಲೂ ವಿಶ್ವಾಸವನ್ನು ಮೂಡಿಸಿ ಇದನ್ನು ಸಾಧ್ಯವಾಗಿಸಿತು.ಈ ಫಲಿತಾಂಶವನ್ನು ಪಡೆಯಲು ಶ್ರಮಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಾ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎ೦ದವರು ತಿಳಿಸಿದ್ದಾರೆ..
ಎಸ್.ಎಸ್.ಎಲ್. ಸಿ. ಫಲಿತಾಂಶ – 818 ತುಳು ಭಾಷಾ ವಿದ್ಯಾರ್ಥಿಗಳು ತೇರ್ಗಡೆ
ಈ ಬಾರಿಯ ಎಸ್.ಎಲ್. ಸಿ. ಪರೀಕ್ಷೆಯಲ್ಲಿ 818 ವಿದ್ಯಾರ್ಥಿಗಳು ತುಳು ಭಾಷಾ ವಿಷಯದಲ್ಲಿ ತೇರ್ಗಡೆಯಾಗಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಭಾಷೆಯನ್ನು ಆಯ್ದಕೊಂಡು 847 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 818 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ, 317 ವಿದ್ಯಾರ್ಥಿಗಳು 100 ಕ್ಕೆ 100 ಅಂಕವನ್ನು ಪಡೆದಿರುತ್ತಾರೆ , ತುಳು ಪಠ್ಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರು ಅಭಿನಂದನೆ ಸಲ್ಲಿಸಿರುತ್ತಾರೆ.
