23.1 C
Karnataka
Friday, May 23, 2025

ಮೇ 16-18 : ಕದ್ರಿ ಉದ್ಯಾನವನದಲ್ಲಿ ಮಾವು ಮೇಳ

ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಮಾವು ಮೇಳವನ್ನು ಮೇ 16 ರಿಂದ 18 ರವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದು, ಮೇಳದಲ್ಲಿ ಭಾಗವಹಿಸುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಅರ್ಹ 20 ರಿಂದ 25 ಮಾವು ಬೆಳೆಗಾರರಿಗೆ ಮಾವು ಹಣ್ಣು ಹಾಗೂ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.
ಮಾವು ಬೆಳೆ ಉತ್ಪಾದಿಸುವ ಪ್ರದೇಶದ ಆರ್.ಟಿ.ಸಿ ಯನ್ನು ಒದಗಿಸಬೇಕು. ಸಂಬಂಧಪಟ್ಟ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರವರಿಂದ ರೈತರು ಮಾವು ಬೆಳೆಗಾರರಾಗಿದ್ದು, ನೈಸರ್ಗಿಕ ಹಣ್ಣು ಮಾಡುತ್ತಿರುವ ಬಗ್ಗೆ ಧೃಢೀಕರಣವನ್ನು ಪಡೆದು ಅರ್ಜಿ ಫಾರಂ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು. ಇಲ್ಲವಾದಲ್ಲಿ ಪರಿಗಣಿಸಲಾಗುವುದಿಲ್ಲ. ಸ್ವತಃ ಜಮೀನು ಹೊಂದಿದ್ದು, ಮಾವು ಬೆಳೆಗೆ ಆದ್ಯತೆ ನೀಡಲಾಗುತ್ತದೆ. ನೈಸರ್ಗಿಕ ಹಣ್ಣು ಮಾಡಲಾದ ಮಾವು ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ.
ರೈತರು ಮತ್ತು ಅಧಿಕಾರಿಗಳ ಸಮಿತಿ ಸಭೆಯಲ್ಲಿ ನಿಗದಿಪಡಿಸಿದ ಮಾರಾಟ ದರದಂತೆ ಮಾರಾಟ ಮಾಡಲು ಬದ್ಧರಿರಬೇಕು. ಸಂಬಂಧಪಟ್ಟ ಇಲಾಖೆಯಿಂದ ದೃಢೀಕರಣಗೊಂಡ ತೂಕ ಮತ್ತು ಅಳತೆ ಯಂತ್ರಗಳನ್ನು ಮಾರಾಟದ ಸಮಯದಲ್ಲಿ ಬಳಸಲು ಅವಕಾಶ ಕಲ್ಪಿಸಲಾಗುತ್ತದೆ. ಸ್ಥಳೀಯ ಮಾರಾಟದಾರರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಮೇ 5 ರಿಂದ 9 ರವರೆಗೆ ಅರ್ಜಿ ಫಾರಂನ್ನು ಪಡೆಯಬೇಕು. ಅರ್ಜಿ ಸಲ್ಲಿಸಲು ಮೇ 12 ಕೊನೆಯ ದಿನ. ಸಮಯ: ಅಪರಾಹ್ನ 3 ಗಂಟೆಯವರೆಗೆ ಸಂಪರ್ಕಿಸಬೇಕಾದ ಸಂಖ್ಯೆ: 0824-2423628, 0824-2444298.
ಮೇ 13 ರಂದು ರೈತರ ಮತ್ತು ಅಧಿಕಾರಿಗಳ ಸಭೆ ನಡೆಸಿ ಮಾರಾಟ ದರ ನಿಗದಿಪಡಿಸುವ ಬಗ್ಗೆ ಚರ್ಚಿಸಿ ದರ ನಿಗದಿಪಡಿಸಲಾಗುವುದು ಹಾಗೂ ನಿಗದಿಪಡಿಸಲಾದ ದರಕ್ಕನುಗುಣವಾಗಿ ಮಾರಾಟ ಮಾಡಲು ಆಯ್ಕೆಯಾದ ರೈತರು ಬದ್ಧರಿರಬೇಕು.
ಆಸಕ್ತ ರೈತರು ಮಾವು ಮೇಳದಲ್ಲಿ ಹಣ್ಣು ಮತ್ತು ಇತರೆ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ಇಚ್ಛಿಸಿದ್ದಲ್ಲಿ, ಸ್ವವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸುವಂತೆ ಹಾಗೂ ಜಿಲ್ಲೆಯ ರೈತರು ಹಾಗೂ ಗ್ರಾಹಕರು ಮಾವು ಮೇಳದ ಸದುಪಯೋಗವನ್ನು ಪಡೆಯಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles