22 C
Karnataka
Thursday, May 22, 2025

ಡಾ. ಕನ್ಯಾನ ಸದಾಶಿವ ಶೆಟ್ಟಿಯವರಿಂದ “ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ 3 ಕೋಟಿ ರೂಪಾಯಿ ದೇಣಿಗೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಭೂತಪೂರ್ವ ಕಾರ್ಯವೈಖರಿಯನ್ನು ಮೆಚ್ಚಿ ಫೌಂಡೇಶನ್ ನ ಗೌರವಾಧ್ಯಕ್ಷರಾದ ಮಹಾದಾನಿ, ಗೌರವಾನ್ವಿತ ಡಾ ಕೆ ಸದಾಶಿವ ಶೆಟ್ಟಿ ಯವರು ಫೌಂಡೇಶನ್ ಟ್ರಸ್ಟ್ ಗೆ ಮೂರು ಕೋಟಿ ರೂಪಾಯಿಗಳ ದೊಡ್ಡ ದೇಣಿಗೆಯನ್ನು ಘೋಷಿಸಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿಯವರು ಪಟ್ಲ ಫೌಂಡೇಶನ್ನಿನ ಗೌರವಾಧ್ಯಕ್ಷರಾದ ನಂತರ ಟ್ರಸ್ಟಿನ ಕಾರ್ಯ ಯೋಜನೆಗಳು ನಾಗಾಲೋಟದಲ್ಲಿ ಮುಂದುವರಿಯುತ್ತಿದ್ದು ಕಲಾಭಿಮಾನಿಗಳ, ಸಂಘಟಕರಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ.


ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ “ಪಟ್ಲ ದಶಮ” ಸಂಭ್ರಮದ ಸಮಾಲೋಚನಾ ಸಭೆಯ ದಿನದಂದು ಫೌಂಡೇಶನ್ ನ ಎಲ್ಲಾ ಮಹಾದಾನಿಗಳು, ಮತ್ತು ಫೌಂಡೇಶನ್ ನ ಪದಾಧಿಕಾರಿಗಳ ಸಮ್ಮುಖದಲ್ಲಿ ಪಟ್ಲ ಫೌಂಡೇಶನ್ ನ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಎಂಆರ್ ಜಿ ಗ್ರೂಪ್ ನ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಅಧ್ಯಕ್ಷರಾಗಿ ಬರೋಡ ಶಶಿಧರ ಶೆಟ್ಟಿ ಅವರು ಜವಾಬ್ದಾರಿಯನ್ನು ಬಹಳ ಪ್ರೀತಿಯಿಂದ ವಹಿಸಿಕೊಂಡಿದ್ದರು. ದಶಮಾನೋತ್ಸವದ ಮುಖ್ಯ ಧ್ಯೇಯವಾಗಿ ಕನಿಷ್ಠ 10 ಕೋಟಿ ರೂಪಾಯಿ ಆದರೂ ಈ ವರ್ಷ ದೇಣಿಗೆ ಸಂಗ್ರಹ ಆಗಬೇಕೆಂದು ಎಲ್ಲಾ ದಾನಿಗಳಲ್ಲಿ ಮನವಿ ಮಾಡಿಕೊಂಡರು.
ಅದರಂತೆ ಬರೋಡ ಶಶಿಧರ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿದ ಮಹಾದಾನಿಗಳಾದ ಡಾ. ಕೆ ಸದಾಶಿವ ಶೆಟ್ಟಿ ಅವರು ಫೌಂಡೇಶನ್ ಗೆ ತನ್ನ ದೇಣಿಗೆಯನ್ನು ಮೂರು ಕೋಟಿ ರೂಪಾಯಿಗೆ ಹೆಚ್ಚಿಸಿದರು.
2020 ರಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಗೌರವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಂತರ ಕನ್ಯಾನ ಸದಾಶಿವ ಶೆಟ್ಟಿಯವರು ನೀಡಿದ ಕೊಡುಗೆ ಅಪಾರ. ಈ ರೀತಿಯ ವಿಶಾಲ ಹೃದಯ ಶ್ರೀಮಂತಿಕೆಯನ್ನು ತೋರಿಸಿದ ನಮ್ಮ ಹೆಮ್ಮೆಯ ಮಹಾದಾನಿಗಳಿಗೆ ಅವರ ಧರ್ಮಪತ್ನಿ ಮತ್ತು ಮಕ್ಕಳಿಗೆ ಫೌಂಡೇಶನ್ ನ ಎಲ್ಲ ಬಂಧುಗಳ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಾಗೂ ನಾವು ನಂಬಿದ ಕಟೀಲು ತಾಯಿ ಭ್ರಮರಾಂಬೆ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಕೃಪೆ ಸದಾ ತಮ್ಮ ಮೇಲೆ ಇರಲಿ ಎಂಬುದಾಗಿ ನಾವೆಲ್ಲರೂ ಬೇಡಿಕೊಳ್ಳುತ್ತಿದ್ದೇವೆ ಎಂದು
ಘವರವಾಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷ ಬರೋಡ ಶಶಿಧರ ಶೆಟ್ಟಿ ಹಾಗೂ ಯಕ್ಷಧ್ರುವ ಪಟ್ಲ ಸಂಭ್ರಮ ದಶಮಾನೋತ್ಸವ ಸಮಿತಿ ಮತ್ತು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಅಧ್ಯಕ್ಷರು, ಪದಾಧಿಕಾರಿಗಳು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles