ಮಂಗಳೂರು: ನಗರದ ಕೈಗಾರಿಕಾ ತರಬೇತಿ ಸಂಸ್ಥೆಗೆ ಆಗಸ್ಟ್ 2025ನೇ ಸಾಲಿಗೆÀ ಮೆರಿಟ್ ಕಂ ರಿಸರ್ವೇಶನ್ ಆಧಾರಿತ ಪ್ರವೇಶವÀನ್ನು ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ www.cite.karnataka.gov.in ಮೂಲಕ ಸ್ವತ: ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ ಹೆಲ್ಪ್‍ಡೆಸ್ಕ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನ. ಆನ್‍ಲೈನ್ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಆಯ್ಕೆ ಮಾಡಿರುವÀ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಮೇ 29 ರೊಳಗೆ ಹಾಜರಾಗಿ ಕಡ್ಡಾಯವಾಗಿ ದಾಖಲಾತಿ ಪರಿಶೀಲನೆ ಮಾಡಬೇಕು.
ಹೆಚ್ಚಿನ ಮಾಹಿತಿಗೆ ಸರ್ಕಾರಿ ಐ.ಟಿ.ಐ ಕದ್ರಿಹಿಲ್ಸ್ ಮಂಗಳೂರು ಸಂಸ್ಥೆಯನ್ನು ಸಂಪರ್ಕಿಸಬಹುದು (ದೂರವಾಣಿ ಸಂಖ್ಯೆ: 6360407593, 9916717090) ಎಂದು ಕದ್ರಿ ಹಿಲ್ಸ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
