ಮ೦ಗಳೂರು: ವ್ಯಕ್ತಿಯೋವ೯ರು ಜಾಗವನ್ನು ನೋಂದಣಿ ಮಾಡುವ ಬಗ್ಗೆ ಹೆಬ್ಬೆರಳಿನ ಗುರುತು ನೀಡಿ ದಾಖಲಾತಿಯನ್ನು ಮಾಡಿಕೊಂಡಿದ್ದು ಕಾರಣದಿಂದಾಗಿ ಆಧಾರ್ ಲಿಂಕ್ ನ್ನು ಉಪಯೋಗಿಸಿ ಯಾರೋ ಅಪರಿಚಿತ ವ್ಯಕ್ತಿಗಳು ಅವರ ಬ್ಯಾಂಕ್ ಖಾತೆಯಿ೦ದ ಹಂತ ಹಂತವಾಗಿ ಒಟ್ಟು 15,000/-ರೂ ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮ೦ಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರ ಮೊಬೈಲ್ ಗೆ ಎಸ್ ಎಮ್ ಎಸ್ ಬಂದಿದ್ದು ಸದ್ರಿ ಸಂದೇಶವನ್ನು ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಿ೦ದ 5,000 ಹಣ ಕಡಿತವಾಗಿರುವ ಬಗ್ಗೆ ತಿಳಿದು ಬಂದಿದೆ.ನಂತರ ದೂರುದಾರರು ಬ್ಯಾಂಕ್ ಶಾಖೆ ಗೆ ತೆರಳಿ ವಿಚಾರಿಸಿ ಖಾತೆಯ ಸ್ಟೇಟ್ ಮೆಂಟ್ ನ್ನು ತೆಗೆದು ಪರಿಶೀಲಿಸಿದಾಗ ಸೆ.12ರಂದು ರೂ.10,000 ಹಾಗೂ ಸೆ.13ರಂದು ರೂ.5,000 ಸೇರಿ ಒಟ್ಟು ರೂ.15,000/-ಹಣವು ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ವರ್ಗಾವಣೆಯಾಗಿರುವುದು ಧೃಢಪಟ್ಟಿರುತ್ತದೆ. ಈ ಬಗ್ಗೆ ದೂರುದಾರರಿಗೆ ಯಾವುದೇ ಓಟಿಪಿ ಸಂದೇಶವು ಬಂದಿರುವುದಿಲ್ಲ . ದೂರುದಾರರು ಆಗಸ್ಟ್ 27 ರಂದು ಮಂಗಳೂರು ಉಪನೋಂದಣಾಧಿಕಾರಿಯವರ ಕಚೇರಿಗೆ ಜಾಗವನ್ನು ನೋಂದಣಿ ಮಾಡುವ ಬಗ್ಗೆ ಹೆಬ್ಬೆರಳಿನ ಗುರುತು ನೀಡಿ ದಾಖಲಾತಿಯನ್ನು ಮಾಡಿಕೊಂಡಿದ್ದು ಇದೇ ಕಾರಣದಿಂದಾಗಿ ಆಧಾರ್ ಲಿಂಕ್ ನ್ನು ಉಪಯೋಗಿಸಿ ಯಾರೋ ಅಪರಿಚಿತ ವ್ಯಕ್ತಿಗಳು ಅವರ ಬ್ಯಾಂಕ್ ಖಾತೆಯಿ೦ದ ಹಂತ ಹಂತವಾಗಿ ಒಟ್ಟು 15,000/-ರೂ ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎ೦ದು ದೂರಿನಲ್ಲಿ ವಿವರಿಸಲಾಗಿದೆ.