ಮಂಗಳೂರು: ದೇಶ ಮೇಡ್ ಇನ್ ಇಂಡಿಯಾ ಮೂಲಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ. ಯುವಕರು ವಿಜ್ಞಾನದ ಹಾದಿಯಲ್ಲಿ ಸಾಕಷ್ಟು ದೂರ ಪ್ರಯಾಣ ಮಾಡಬೇಕಿದೆ. ಸ್ವಾವಲಂಬನೆ ಸಾಧಿಸಲು ಯುವ ಜನಾಂಗದ ಕ್ರೋಢೀಕರಣವಾಗಬೇಕು. ಆಗ ಮಾತ್ರ ಬಲಿಷ್ಠ ರಾಷ್ಟ್ರವಾಗುವುದರಲ್ಲಿಯಾವುದೇ ಸಂದೇಹವಿಲ್ಲ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಕೆ. ಅಭಿಪ್ರಾಯಪಟ್ಟರು.
ನಗರದ ವಿ.ವಿ. ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಕಾಲೇಜಿನ ಐಕ್ಯೂಎಸಿ ಸಹಯೋಗದಲ್ಲಿ ಪರಿಸರ ಸಂಘ, ವಿಜ್ಞಾನ ಸಂಘ ಮತ್ತು ಆವಿಷ್ಕಾರ ಸಂಘದ ಉದ್ಘಾಟನಾ ಮತ್ತು ಅಬ್ದುಲ್ಕ ಲಾಂರವರ ಪ್ರೇರಣಾತ್ಮಕ ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಉಪಗ್ರಹ ಉಡಾವಣೆ ಮಾಡಿದ ಆರು ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂಬ ಹೆಮ್ಮೆ ಪ್ರತಿ ನಾಗರಿಕನಿಗೂ ಇರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಸಿಗಲಿಲ್ಲ. ಈ ನಿಟ್ಟನಲ್ಲಿ ಯುವ ಜನಾಂಗ ವಿಜ್ಞಾನದತ್ತ ಹೆಚ್ಚು ಹೆಚ್ಚು ಮುಖ ಮಾಡಬೇಕಿದೆ.
ವಿದೇಶಿ ರಾಷ್ಟ್ರಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ದೂರ ಪ್ರಯಾಣಿಸಿದ್ದಾರೆ. ಈ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಆದರೆ ಭಾರತೀಯರು ದೇಶವನ್ನು ಪ್ರೀತಿಸುವ ಮೂಲಕ ದೇಶಕ್ಕಾಗಿ ದುಡಿಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿತ ವಚನಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ವಹಿಸಿದ್ದರು. ಪರಿಸರ ಸಂಘ, ವಿಜ್ಞಾನ ಸಂಘ ಮತ್ತು ಆವಿಷ್ಕಾರ ಸಂಘದ ಸಂಯೋಜಕ ಡಾ. ಜಗನ್ನಾಥ್ ನೆಟ್ಟರ್ಸ್ವಾ ಗತಿಸಿದರು. ಭೌತಶಾಸ್ತ್ರ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.