ಮ೦ಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆ ಗಳ ನಗರಾಭಿವೃದ್ಧಿಪ್ರಾಧಿಕಾರಗಳ ಒಕ್ಕೂಟ ದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ನೇತೃತ್ವದ ನಿಯೋಗ ನಗರ ಮತ್ತು ಗ್ರಾಮಾoತರ ಯೋಜನೆ ಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ. ಪಂಕಜ ಎಂ. ಎಸ್ ರವರನ್ನು ಭೇಟಿಯಾಗಿ ಸಮಸ್ಯೆಗಳ ಮತ್ತು ಬೇಡಿಕೆಯ ಮನವಿ ಸಲ್ಲಿಸಿ ವಿಸ್ತ್ರತ ವಾಗಿ ಚರ್ಚಿಸಲಾಯಿತು
ಭಿನ್ನವಾದ ಬೌಗೋಳಿಕ ಹಿನ್ನಲೆ ಹೊಂದಿರುವ ದ. ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಯನ್ನೊಳಗೊಂಡ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಬೇಕು ಹಾಲಿ ಇರುವ ನಗರ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿರುವ ವಲಯ ನಿಯಮಾವಳಿಗಳು ಕರಾವಳಿ ಪ್ರದೇಶ ದಲ್ಲಿ ಅನುಷ್ಟಾನ ಗೊಳಿಸುವುದು ಕಷ್ಟ ಸಾಧ್ಯವಾಗಿದೆ ಎಂದು ಮನವರಿಕೆ ಮಾಡಲಾಯಿತು
ನಿಯೋಗದಲ್ಲಿ ಒಕ್ಕೂಟದ ಸಂಚಾಲಕರುಗಳಾದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ,ಮೂಡಬಿದ್ರಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹರ್ಷ ವರ್ಧನ ಜೈನ್, ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಸ್ತ, ವಿವಿಧ ಪ್ರಾಧಿಕಾರದ ಸದಸ್ಯರುಗಳಾದ ಸತೀಶ್ ಭಂಡಾರಿ, ಶೇಖರ್ ಬೊಳ್ಳಿ ಇನ್ನಿತರರು ಮತ್ತು ಹಿರಿಯ ಉಪ ನಿರ್ದೇಶಕ ರಾದ ಹನುಮಂತ ರಾಯಪ್ಪ ಮೊದಲಾದವರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು


