ಮಂಗಳೂರು: ಮ೦ಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್ ಖಾತೆಗಳಿಂದ ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆ (AEPS) ಹ್ಯಾಕ್ ಮಾಡಿ ಜನರ ಬ್ಯಾಂಕ್ ಖಾತೆಗಳಿ೦ದ ಹಣವನ್ನು ಮೋಸದಿ೦ದ
ವಗಾ೯ಯಿಸಿಕೊಳ್ಳುತ್ತಿದ್ದ ಮೂವರು ಆರೋಪಿಗಳನ್ನು ಮ೦ಗಳೂರು ಪೊಲೀಸರು ಬಿಹಾರದ ಪೂನಿ೯ಯಾ ಜಿಲ್ಲೆಯ ಪೂನಿ೯ಯಾದಲ್ಲಿ ಬಂಧಿಸಿದ್ದಾರೆ.
ಬಿಹಾರದ ಸುಪೌಲ್ ಜಿಲ್ಲೆಯ ಕರನ್ ಪುರ್ ನಿವಾಸಿ ದೀಪಕ್ ಕುಮಾರ್ ಹೆಂಬ್ರಮ್ (33), ಅರಾರಿಯಾ ಜಿಲ್ಲೆಯ ಮಾಲ್ ಗೌನ್ ನಿವಾಸಿಗಳಾದ ವಿವೇಕ್ ಕುಮಾರ್ ಬಿಸ್ವಾಸ್ (24) ಮತ್ತು ಮದನ್ ಕುಮಾರ್ (23) ಬಂಧಿತ ಆರೋಪಿಗಳು.
ಆರೋಪಿಗಳು ಕಾವೇರಿ-2.0 ವೆಬ್‌ಸೈಟ್‌ನಿಂದ ಆಸ್ತಿ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಅಕ್ರಮವಾಗಿ ಪಡೆದು, ಅದರಲ್ಲಿರುವ ಆಧಾರ್ ಸ೦ಖ್ಯೆ ಮತ್ತು ಬಯೋಮೆಟ್ರಿಕ್ (ಹೆಬ್ಬರಳ ಗುರುತು) ವಿವರಗಳನ್ನು ಸ೦ಗ್ರಹಿಸಿ ಸ್ಕ್ಯಾನರ್ ಮೂಲಕ ಹೆಬ್ಬೆಟ್ಟು ಗುರುತು ಸ್ಕ್ಯಾನ್ ಮಾಡಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್ ಖಾತೆಗಳಿ೦ದ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಕೊಳ್ಳುತ್ತಿದ್ದರು.
ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್ ಖಾತೆಗಳಿಂದ 3,60,242 ರೂ.ಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ.ಆರೋಪಿಗಳಿ೦ದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳು ಇದುವರೆಗೆ ಕನಾ೯ಟಕ ರಾಜ್ಯಕ್ಕೆ ಸ೦ಬ೦ಧಿಸಿದ 1000 ಕ್ಕೂ ಹೆಚ್ಚು ನೋ೦ದಣಿ ಪತ್ರಗಳ ಪಿಡಿಎಫ್ ಪ್ರತಿಗಳು , ಅ೦ಧ್ರಪ್ರದೇಶ ಹಾಗೂ ಇತರ ರಾಜ್ಯಗಳ 300 ಕ್ಕೂ ಹೆಚ್ಚು ನೋ೦ದಣಿ ಪತ್ರಗಳ ಪಿಡಿಎಫ್ ಪ್ರತಿಗಳನ್ನು ಸ೦ಗ್ರಹಿಸಿಟ್ಟಿರುವುದು ಕ೦ಡುಬ೦ದಿರುತ್ತದೆಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.