ಮ೦ಗಳೂರು: ಮಲೆನಾಡು, ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆಗಳಲ್ಲಿ ಕೆಲವು ಘೋಷಣೆಗಳನ್ನು ೧೦೦ ದಿನದಲ್ಲಿ ಕಾರ್ಯರೂಪಕ್ಕೆ ತಂದಿದೇವೆ. ಸರ್ಕಾರ. ನುಡಿದಂತೆ ನಡೆದಿದೆ ಎ೦ದು ವಿಧಾನ ಪರಿಷತ್ ಸದಸ್ಯ ಮ೦ಜುನಾಥ ಭಂಡಾರಿ ಹೇಳಿದ್ದಾರೆ.
ಜಿಲ್ಲಾ ಕಾ೦ಗ್ರೆಸ್ ಕಚೇರಿಯಲ್ಲಿ ಮ೦ಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾ೦ಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಅವರು ಜಿಲ್ಲಾವಾರು ಭೇಟಿ ನೀಡಿ ತಯಾರಿಸಿದ್ದಾರೆ. ಪಕ್ಷ ಬಿಟ್ಟು ಜನಸಾಮಾನ್ಯರೊಂದಿಗೆ ಚರ್ಚಿಸಿ ಕ್ರೋಢೀಕರಿಸಿ ಕರಾವಳಿಗೆ ೧೦ ಆಶ್ವಾಸನೆಗಳನ್ನು ಘೋಷಿಸಿದ್ದೆವು. ಕರಾವಳಿ ಅಭಿವೃದ್ದಿ ಪ್ರಾಧಿಕಾರವನ್ನು ನಿಗಮ ಮಾಡಲಾಗಿದೆ. ಬಂಟರ ಅಭಿವೃದ್ಧಿ ನಿಗಮ ಭರವಸೆ ನೀಡಿದೆವು. ಇದೀಗ ಘೋಷಣೆ ಮಾಡಲಾಗಿದೆ. ಮೀನುಗಾರಿಕಾ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ೩ ಲಕ್ಷಕ್ಕೆ ಏರಿಕೆ ಮಾಡಿದೇವೆ. ಡೀಸೆಲ್ ಸಬ್ಸಿಡಿ ಹೆಚ್ಚಳ ಮಾಡಿದ್ದೇವೆ ಎ೦ದರು.
ಶಾಸಕ ಅಶೋಕ್ ರೈ ಅವರು ಮಾತನಾಡಿ ಹಿ೦ದಿನ ಸರ್ಕಾರಗಳು ಸರ್ಕಾರದ ಮಟ್ಟದಲ್ಲಿ ಬಂಟ ಸಮುದಾಯವನ್ನು ಗುರುತಿಸಿಯೆ ಇರಲಿಲ್ಲ. ಹಾಗಾಗಿ ಬಂಟ ನಿಗಮ ಭರವಸೆ ನೀಡಿದೆವು. ಕಲಾಪದಲ್ಲೂ ಈ ವಿಚಾರ ಉಲ್ಲೇಖ ಮಾಡಿದ್ದೆವು. ಇದೀಗ ಘೋಷಣೆ ಮಾಡಲಾಗಿದೆ ಎ೦ದರು.೫ ಗ್ಯಾರಂಟಿಗಳಲ್ಲಿ ೪ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ನಾವು ಮಹಿಳೆಯರ ಕೈ ಬಲಗೊಳಿಸುವ ಕೆಲಸ ಮಾಡ್ತಿದೇವೆ. ಪುತ್ತೂರಿನ ಇತಿಹಾಸದಲ್ಲಿ ೧೦೧೦ ಕೋಟಿ ಅನುದಾನ ಬಂದಿದೆ. ಅಭಿವೃದ್ಧಿ ಆಗುತಿದ್ದರೂ ಬಿಜೆಪಿಯವರು ಅಪಪ್ರಚಾರ ಮಾಡ್ತಿದಾರೆ, ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ಮಾಡಬೇಡಿ ಎ೦ದರು.
ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾ೦ಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಪಂಚ ರಾಜ್ಯ ಚುನಾವಣೆಯಲ್ಲೂ ಕರ್ನಾಟಕ ಮಾದರಿಯಂತೆ ಗ್ಯಾರಂಟಿ ಘೋಷಣೆ ಮಾಡ್ತಿದಾರೆ. ಎಲ್ಲ ರಾಜ್ಯಗಳಲ್ಲೂ ಗ್ಯಾರಂಟಿ ಅನುಷ್ಠಾನ ಆಗಲು ಕರ್ನಾಟಕ ಮುನ್ನುಡಿ ಬರೆದಿದೆ. ಪಂಚ ರಾಜ್ಯಗಳಲ್ಲೂ ಕಾ೦ಗ್ರೆಸ್ ಜಯ ಗಳಿಸಲಿದೆ ಎ೦ದರು.ಮುಖ೦ಡರಾದ ಸಾಹುಲ್ ಹಮೀದ್, ಮಹಾಬಲ ಮಾಲ೯, ಸ೦ತೋಷ್ ಕುಮಾರ್ ಶೆಟ್ಟಿ, ಸುದಶ೯ನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
.