ಮ೦ಗಳೂರು: ವಿಶ್ವದಲ್ಲಿ ಭಾರತ ಶಕ್ತಿಶಾಲಿಯಾಗಿ ನಿಲ್ಲಲ್ಲು ಕಾರಣಕರ್ತರಾದ ಇಂದಿರಾ ಗಾಂಧಿ ಅವರ ಕೊಡುಗೆಗಳು ಸ್ಮರಣೀಯ. ದೇಶದ ಏಕತೆ, ಅಖಂಡತೆಗಾಗಿ ಪ್ರಾಣ ತ್ಯಾಗ ಮಾಡಿರುವ ಅವರು ಭಾರತೀಯರ ಹೃದಯದಲ್ಲಿ ಸದಾ ಅಮರರಾಗಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.
ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರ ಹೆಸರನ್ನು ಇತಿಹಾಸ ಪುಟದಿಂದ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ದೇಶವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ,
ನೀಲ ಕ್ರಾಂತಿ, ಜೀತ ಪದ್ಧತಿ ನಿರ್ಮೂಲನೆ, ರಾಜಧನ ರದ್ಧತಿ, ಬಾಂಗ್ಲಾ ವಿಮೋಚನೆ, ಬ್ಯಾಂಕುಗಳ ರಾಷ್ಟ್ರೀಕರಣ, ಶಿಮ್ಲಾ ಒಪ್ಪಂದ, ಆರ್ಥಿಕತೆಗೆ ಉತ್ತೇಜನ, ಆಹಾರ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡಿ ಜನಪ್ರಿಯವಾಗಿದ್ದರು. ಅಣು ಯೋಜನೆಯಲ್ಲಿ ಭಾರತ ಸಶಕ್ತವಾಗಬೇಕು ಎಂಬ ನೆಹರೂ ಅವರ ಆಲೋಚನೆಯನ್ನು ಇಂದಿರಾ ಗಾಂಧಿ ಸಾಕಾರ ಗೊಳಿಸಿ ವಿಶ್ವಕ್ಕೆ ಭಾರತದ ಶಕ್ತಿಯನ್ನು
ಮೊದಲ ಬಾರಿಗೆ ಪರಿಚಯಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದರು ಎಂದು ಸ್ಮರಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 49ನೇ ಅಧ್ಯಕ್ಷರಾಗಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯ ನಾಯಕತ್ವ ವಹಿಸಿದ ಉಕ್ಕಿನ ಮನುಷ್ಯ ಭಾರತ ರತ್ನಸರ್ದಾರ್ ವಲ್ಲಭಭಾಯ್ ಪಟೇಲ್ಅ ವರು ಭಾರತ ಗಣರಾಜ್ಯ ಸ್ಥಾಪನೆ ಮತ್ತು ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿ ಸ್ವತಂತ್ರ ಭಾರತವನ್ನು ಅಖಂಡ ಭಾರತವಾಗಿಸಲು ಶ್ರಮಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿದರು. ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಲುಕ್ಮಾನ್ ಬಂಟ್ವಾಳ್, ವಿವೇಕ್ ರಾಜ್ ಪೂಜಾರಿ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಬಿ.ಎಂ.ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಕೆ.ಅಪ್ಪಿ, ಪೂರ್ಣೇಶ್ ಭಂಡಾರಿ, ನೀರಜ್ ಚಂದ್ರಪಾಲ್, ಜೆ.ಅಬ್ದುಲ್ ಸಲೀಂ, ಪದ್ಮನಾಭ ಅಮೀನ್, ಟಿ.ಹೊನ್ನಯ್ಯ, ಮುರಳಿಧರ್ ರೈ, ಟಿ.ಕೆ.ಸುಧೀರ್, ಸುಹಾನ್ ಆಳ್ವ, ಜಯಶೀಲ ಅಡ್ಯಂತಾಯ, ಆರಿಫ್ ಬಾವ, ಪ್ರಕಾಶ್ ಆಳ್ವಿನ್, ಸುರೇಶ್ ಪೂಜಾರಿ, ಲಕ್ಷ್ಮೀ ನಾಯರ್, ರಥಿಕಲಾ, ಮಮತಾ
ಶೆಟ್ಟಿ, ಭಾಸ್ಕರ್ ರಾವ್, ಗಿರೀಶ್ ಶೆಟ್ಟಿ, ದುರ್ಗಪ್ರಸಾದ್, ಶಾಂತಲ ಗಟ್ಟಿ, ಚಂದ್ರಕಲಾ ಜೋಗಿ, ಮಂಜುಳಾ ನಾಯಕ್, ಧರ್ಮಾನಂದ ಶೆಟ್ಟಿಗಾರ್, ಯೋಗಿಶ್ ಕುಮಾರ್, ಯೋಗಿಶ್ ನಾಯಕ್, ಮಲ್ಲಿಕಾರ್ಜುನ ಕೋಡಿಕಲ್, ಗೀತಾ ಅತ್ತಾವರ, ಸತೀಶ್ ಪೆಂಗಾಲ್, ಆಸಿಫ್ ಬೆಂಗ್ರೆ, ಹೈದರ್ಬೋಳಾರ್, ಲಕ್ಷ್ಮಣ್ ಶೆಟ್ಟಿ, ಫಯಾಝ್ ಅಮ್ಮೆಮ್ಮಾರ್ ಉಪಸ್ಥಿತರಿದ್ದರು.