16.7 C
Karnataka
Saturday, November 23, 2024

ನವೆಂಬರ್ 4 ಮತ್ತು 5ರ೦ದು ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ, ಹೇಮಾ ನಾಯ್ಕ್‌ ಅಧ್ಯಕ್ಷೆ

ಮ೦ಗಳೂರು: ನವೆಂಬರ್ 4 ಮತ್ತು 5ರ೦ದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರಲ್ಲಿ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ
ಸಮ್ಮೇಳನದಲ್ಲಿ, ಎರಡೂ ದಿನ ಪರಿಸಂವಾದ, ಸಾಹಿತ್ಯ ಸಾದರೀಕರಣ,ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಹಬ್ಬ ನಡೆಯಲಿದೆ ಎ೦ದು ಸಮ್ಮೇಳನ ಸ್ವಾಗತ ಸಮಿತಿ, ಕಾರ್ಯಾಧ್ಯಕ್ಷ ಎಚ್. ಎಮ್. ಪೆರ್ನಾಲ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಖ್ಯಾತ ಹಿಂದಿ ಕವಿ, ವಿಮರ್ಷಕ ವಿದ್ವಾಂಸ ಉದಯನ್ ವಾಜಪೇಯಿ ಅವರು ಶನಿವಾರ ಪೂರ್ವಾಹ್ನ 10 ಕ್ಕೆ ಸಮ್ಮೇಳನ ಉದ್ಘಾಟಿಸಿ ಸಾಹಿತ್ಯ ಮತ್ತು ಬದುಕು39; ಈ ಕುರಿತು ಶಿಖರೋಪನ್ಯಾಸ ನೀಡಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷೆ ಖ್ಯಾತ ಕಾದಂಬರಿಕಾರ್ತಿ ಮತ್ತು ಕೊಂಕಣಿ ಚಳುವಳಿಯ ಮುಂದಾಳು ಹೇಮಾ ನಾಯ್ಕ್‌ ಸಮ್ಮೇಳನದಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಭಾನುವಾರ ದಿನಾಂಕ 5 ರ ಸಂಜೆ 3.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಖ್ಯಾತ ಕನ್ನಡ ಸಾಹಿತಿ,ಪ್ರಾಧ್ಯಾಪಕಿ ಮಮತಾ ಜಿ. ಸಾಗರ ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ ಈ ಕುರಿತು ಉಪನ್ಯಾಸ ನೀಡಲಿದ್ದಾರೆ ಎ೦ದರು.


ಪ್ರಮುಖ ಉಪನ್ಯಾಸಗಳು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಇದ್ದು, ಕೊಂಕಣಿಯೇತರ ಸಾಹಿತ್ಯಾಸಕ್ತರೂ ಸಮ್ಮೇಳನದಲ್ಲಿ
ಭಾಗವಹಿಸಬಹುದಾಗಿದೆ. ಶನಿವಾರ ದಿನಾಂಕ 4 ರಂದು ಸಂಜೆ 5.30 ಕ್ಕೆ ಖ್ಯಾತ ವಿದ್ವಾಂಸ ಡಾ ಪುರುಷೋತ್ತಮ ಬಿಳಿಮಳೆಯವರ ಅಧ್ಯಕ್ಷತೆಯಲ್ಲಿಸಮಕಾಲೀನ ಬರಹಗಾರಿಗೆ ಸವಾಲುಗಳು ಈ ವಿಷಯದ ಮೇಲೆ ಇಂಗ್ಲಿಷ್ ಭಾಷೆಯಲ್ಲಿ ಪರಿಸಂವಾದ ನಡೆಯಲಿದ್ದು, ಉದಯನ್ ವಾಜಪೇಯಿ ಮತ್ತುಮಮತಾ ಜಿ. ಸಾಗರ ವಿಚಾರ ಮಂಡನೆ ಮಾಡಲಿದ್ದಾರೆ.
ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಹಾಗೂ ಗೋವಾ, ಕೇರಳ, ಮಹಾರಾಷ್ಟ್ರ, ದೆಹಲಿಯಿಂದಲೂ ಸುಮಾರು 600 ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆ ಮತ್ತು ಸೊಗಡನ್ನು ಸವಿಯಲು 25 ನೇ ಅಖಿಲ ಭಾರತೀಯಸಾಹಿತ್ಯ ಸಮ್ಮೇಳನ ಕರಾವಳಿಯ ಸಾಹಿತ್ಯಾಸಕ್ತರಿಗೆ ಅವಕಾಶ ಕಲ್ಪಿಸಿದೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಳ್ಳುವವರಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎ೦ದವರು ವಿವರಿಸಿದರು..

ಹೇಮಾ ನಾಯ್ಕ್‌ :
ವಿದ್ಯಾರ್ಥಿ ಜೀವನದಲ್ಲೇ ಬರವಣಿಗೆ ಮತ್ತು ಕೊಂಕಣಿ ಚಳುವಳಿಗೆ ದುಮುಕಿದ ಹೇಮಾ ನಾಯ್ಕ್‌ ಕೊಂಕಣಿ, ಮರಾಠಿ, ಹಿಂದಿ ಮತ್ತು
ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ಕತೆ, ಕಾದಂಬರಿ, ರೇಡಿಯೊ ನಾಟಕಗಳನ್ನುರಚಿಸಿರುವ ಅವರು ಸಂಪಾದಕಿ ಮತ್ತು ಪ್ರಕಾಶಕಿಯಾಗಿಯೂ ಸೇವೆ ನೀಡಿದ್ದಾರೆ. ಈ ವರೆಗೆ 8 ಸ್ವತಂತ್ರ ಪುಸ್ತಕಗಳನ್ನು ಪ್ರಕಟಿಸಿರುವ ಹೇಮಾ ನಾಯ್ಕ್‌, 10 ಕ್ಕೂ ಜಾಸ್ತಿ ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಮಹಿಳಾ ಪರ ಸಂಘಟನೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿಗುರುತಿಸಿಕೊಂಡಿರುವ ಹೇಮಾ ನಾಯ್ಕ್‌, ದೂರದರ್ಶನ ವಾಹಿನಿಗಾಗಿ ಕೊಂಕಣಿ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಅವರ ಸಾಹಿತ್ಯ ಸೇವೆಗಾಗಿ ಹೊಸ ದೆಹಲಿಯ ಸಾಹಿತ್ಯಅಕಾಡೆಮಿ, ಗೋವಾ ಸರಕಾರದ ಕಲಾ ಅಕಾಡೆಮಿ, ಭಾಷಾ ಮಂಡಳ್ ಗೋವಾ, ಕಥಾ, ಮಣಿಪಾಲದ ಡಾ ಟಿ. ಎಂ. ಪೈ. ಪೌಂಡೇಶನ್ ಹೀಗೆ ಹತ್ತಾರು ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ಹೇಮಾ ನಾಯ್ಕ್‌ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷರಾಗಿ
ಕಾರ್ಯನಿರ್ವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ :ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರು ಮೈಕಲ್ ಡಿ ಸೊಜಾ, ಉಪಾಧ್ಯಕ್ಷ ನಂದಗೋಪಾಲ ಶೆಣೈ,
ಅಖಿಲ ಭಾರತೀಯ ಕೊಂಕಣಿ ಪರಿಷದ್ ಉಪಾಧ್ಯಕ್ಷ ಮೆಲ್ವಿನ್ ರೊಡ್ರಿಗಸ್,ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಟೈಟಸ್ ನೊರೊನ್ಹಾ ಉಪಸ್ಥಿರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles